Publish Date: Wed, 12 Sep 2018 (07:10 IST)
Updated Date: Wed, 12 Sep 2018 (07:12 IST)
ಬೆಂಗಳೂರು : ಕಿರುತೆರೆ ನಟಿ ಸುಶ್ಮಿತಾ ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿದ ನಟಿ ಸುಶ್ಮಿತಾ ಅವರಿಗೆ ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬುವವರು ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ಹೇಳಿ ಲಕ್ಷಾಂತರ ರೂ. ತೆಗೆದುಕೊಂಡು ವಂಚಿಸಿದ್ದಾರೆ. ಇವರ ಜೊತೆಗೆ ಅವರ ಸ್ನೇಹಿತೆ ಸರೋಜ ಎನ್ನುವವರಿಗೂ ವಂಚನೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.
ಅಷ್ಟೇ ಅಲ್ಲದೇ ರಘು ಬಳಿ ಹಣ ವಾಪಾಸು ಕೊಡುವಂತೆ ಕೇಳಿದರೆ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆ. ಸದ್ಯ ಸರೋಜ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ 420, 418, ಹಾಗೂ 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.