ಹಾರ್ದಿಕ್-ರಾಹುಲ್ ವಿವಾದದ ಬಗ್ಗೆ ಕೊನೆಗೂ ಕ್ಷಮೆ ಕೇಳಿದ ಕರಣ್ ಜೋಹರ್

ಗುರುವಾರ, 24 ಜನವರಿ 2019 (09:31 IST)
ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ನಿಷೇಧಕ್ಕೊಳಗಾಗದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಪ್ರಕರಣದ ಬಗ್ಗೆ ಕೊನೆಗೂ ಕಾಫಿ ವಿತ್ ಕರಣ್ ಶೋ ನಿರೂಪಕ ಕರಣ್ ಜೋಹರ್ ಕ್ಷಮೆ ಯಾಚಿಸಿದ್ದಾರೆ.


ಶೋನಲ್ಲಿ ಕರಣ್ ಕೇಳಿದ ವಿವಾದಾತ್ಮಕ ಪ್ರಶ್ನೆಗೆ ಕ್ರಿಕೆಟಿಗರು ವಿವಾದಾತ್ಮಕವಾಗಿ ಉತ್ತರಿಸಿದ್ದರು. ಹೀಗಾಗಿ ಕೇವಲ ಕ್ರಿಕೆಟಿಗರು ಮಾತ್ರವಲ್ಲ, ಕರಣ್ ಕೂಡಾ ತಪ್ಪಿತಸ್ಥ. ಹಾಗಿದ್ದರೂ ಕರಣ್ ಗೆ ಯಾವುದೇ ಶಿಕ್ಷೆಯಿಲ್ಲದೇ ಪಾರಾಗಿದ್ದಾರೆ ಎಂದು ಹಲವರು ಆಕ್ಷೇಪಿಸಿದ್ದರು.

ಇಷ್ಟೆಲ್ಲಾ ಆದ ಬಳಿಕ ಕರಣ್ ಇದೀಗ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮದೂ ಇದರಲ್ಲಿ ತಪ್ಪಿತ್ತು. ತನ್ನ ಶೋ ಇದಾಗಿದ್ದರಿಂದ ತಾನೂ ಜವಾಬ್ಧಾರ. ಆದರೆ ಈ ಹುಡುಗರು ನಾನು ಕರೆದಿದ್ದಕ್ಕೆ ಶೋಗೆ ಬಂದರು. ಈಗ ತಮ್ಮ ಕಾಮೆಂಟ್ ಗೆ ಸಾಕಷ್ಟು ಶಿಕ್ಷೆ ಅನುಭವಿಸಿದ್ದಾರೆ. ಘಟನೆ ಬಗ್ಗೆ ನಿಜಕ್ಕೂ ನನಗೆ ಬೇಸರವಾಗಿದೆ. ಈ ತಪ್ಪನ್ನು ನಾನು ಯಾವ ರೀತಿ ಸರಿಪಡಿಸಬಹುದು ಎಂದು ಹಲವು ರಾತ್ರಿ ನಿದ್ದೆಯಿಲ್ಲದೇ ಕಳೆದಿದ್ದೆ. ಆದರೆ ನನ್ನ ಮಾತನ್ನು ಕೇಳುವವರು ಯಾರು? ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ ಎಂದು ಜೋಹರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಮಾಷೆ ಮಾಡಿದ ಫೋಟೋಗ್ರಾಫರ್ ಗೆ ಜಾಹ್ನವಿ ಕಪೂರ್ ಹೇಳಿದ್ದೇನು?