ತಮಾಷೆ ಮಾಡಿದ ಫೋಟೋಗ್ರಾಫರ್ ಗೆ ಜಾಹ್ನವಿ ಕಪೂರ್ ಹೇಳಿದ್ದೇನು?

ಗುರುವಾರ, 24 ಜನವರಿ 2019 (09:28 IST)
ಮುಂಬೈ: ಬಾಲಿವುಡ್ ನ ಉದಯೋನ್ಮುಖ ತಾರೆ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಈಗ ಯುವಕರ ಫೇವರಿಟ್ ನಟಿ. ಈಕೆಯನ್ನು ಕಂಡರೆ ಯಾರು ತಾನೇ ಗುರುತು ಹಿಡಿಯಲ್ಲ?


ಆದರಲ್ಲೂ ಫೋಟೋಗ್ರಾಫರ್ ಗಳಿಗೆ ಇವಳ ಗುರುತು ಇಲ್ಲದಿದ್ದೀತೇ? ಹಾಗಿದ್ದರೂ ಫೋಟೋಗ್ರಾಫರ್ ಒಬ್ಬ ಜಾಹ್ನವಿಯನ್ನು ನೋಡಿ ‘ಸಾರಾ ಜೀ’ ಎಂದು ಕೂಗಿ ಕರೆದಿದ್ದಾನೆ.  ಸಾರಾ ಆಲಿಖಾನ್ ನಿಮಗೆಲ್ಲಾ ಗೊತ್ತೇ ಇರುವಂತೆ ಸೈಫ್ ಆಲಿ ಖಾನ್ ಪುತ್ರಿ. ಈಕೆಯೂ ಇತ್ತೀಚೆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿ.

ಆದರೆ ಫೋಟೋಗ್ರಾಫರ್ ಗೊತ್ತಿದ್ದರೂ ಬೇಕೆಂದೇ ಸಾರಾ ಹೆಸರು ಹಿಡಿದು ತನ್ನನ್ನು ಕರೆದಿದ್ದಕ್ಕೆ ನಕ್ಕ ಜಾಹ್ನವಿ ‘ಬೇಕು ಬೇಕೆಂದೇ ಹೀಗೆ ಮಾಡ್ತಿದ್ದೀಯಾ?’ ಎಂದು ಆಕ್ಷೇಪಿಸುತ್ತಲೇ ತಮ್ಮ ಕಾರು ಏರಿದ್ದಾರೆ. ಸುತ್ತಲಿದ್ದವರೂ ಫೋಟೋಗ್ರಾಫರ್ ತಮಾಷೆಗೆ ನಕ್ಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಥಿಯೇಟರ್ ನಲ್ಲೇ ನೋಡಕ್ಕಾಗ್ಲಿಲ್ಲ, ಇನ್ನು ಮನೆಲೂ ಈ ಟಾರ್ಚರ್ ನೋಡ್ಬೇಕಾ? ಮತ್ತೆ ಟ್ರೋಲ್ ಆದ ಜೋಗಿ ಪ್ರೇಮ್