ನನ್ನ ಪಡೀಬೇಕೆಂದೇ ಆ ನಿರ್ದೇಶಕ ಹೊಂಚು ಹಾಕಿದ್ದ ಎಂದ ಖ್ಯಾತ ನಟಿ

ಭಾನುವಾರ, 20 ಜನವರಿ 2019 (09:33 IST)
ಮುಂಬೈ: ಸಿನಿಮಾ ಲೋಕದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಮತ್ತು ತನಗಾದ ಅನುಭವದ ಬಗ್ಗೆ ಬಾಲಿವುಡ್ ನಟಿ ಸ್ವರ ಭಾಸ್ಕರ್ ಬಾಯ್ಬಿಟ್ಟಿದ್ದಾರೆ.


ಸಿನಿಮಾ ಲೋಕಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತನ್ನ ಮೇಲೆ ನಿರ್ದೇಶಕರೊಬ್ಬರು ಕಾಮತೃಷೆ ತೀರಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಆ ನಿರ್ದೇಶಕ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ. ಆದರೆ ನಾನವನ ಕೈಗೆ ಸಿಗಲಿಲ್ಲ. ಆಗ ನನಗೆ ಇದೇನೆಂದು ಗೊತ್ತಿರಲಿಲ್ಲ. ಆದರೆ ಈಗ ಎಲ್ಲರೂ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುವಾಗ ಆರೇಳು ವರ್ಷಗಳ ನಂತರ ಆವತ್ತು ಏನು ನಡೀತು, ಆ ನಿರ್ದೇಶಕನ ಉದ್ದೇಶ ಏನಾಗಿದ್ದಿರಬಹುದು ಎಂದು ಅರಿತುಕೊಂಡೆ ಎಂದಿದ್ದಾರೆ.

ಅದೊಂದೇ ಸಲವಲ್ಲ, ಮತ್ತೊಮ್ಮೆ, ಮತ್ತೊಬ್ಬ ನಿರ್ದೇಶಕನೂ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾದ. ಆದರೆ ದೇವರ ದಯೆಯಿಂದ ಎಸ್ಕೇಪ್ ಆಗಿದ್ದೆ ಎಂದಿದ್ದಾರೆ. ಆದರೆ ನಮ್ಮ ದೇಶದಲ್ಲಿ ಲೈಂಗಿಕ ಕಿರುಕುಳದಂತಹ ಘಟನೆ ಬಗ್ಗೆ ಮಾತನಾಡಿದವರನ್ನೇ ಅಪರಾಧಿಯೆಂಬಂತೆ ನೋಡಲಾಗುತ್ತಿದೆ ಎಂದು ಸ್ವರ ಭಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 10 ಇಯರ್ಸ್ ಚಾಲೆಂಜ್ ಸ್ವೀಕರಿಸಿದ ಮಲೈಕಾ ಅರೋರಾಗೆ ಟ್ವಿಟರಿಗರು ಈ ಪರಿ ಬೆಂಡೆತ್ತಿದ್ದು ಯಾಕೆ ಗೊತ್ತಾ?!