ಪತಿ ರಣವೀರ್ ಸಿಂಗ್ ಗೆ ಈ ಮೂರು ವಿಚಾರ ಮಾಡದಂತೆ ಕಟ್ಟಪ್ಪಣೆ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ!

ಗುರುವಾರ, 17 ಜನವರಿ 2019 (09:21 IST)
ಮುಂಬೈ: ಮದುವೆಯಾದ ಮೇಲೆ ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ಹೆಂಡತಿ ಮಾತಿಗೆ ಇಲ್ಲವೆನ್ನಲಾಗದು. ಇದೀಗ ರಣವೀರ್ ಸಿಂಗ್ ವಿಚಾರದಲ್ಲೂ ಅದೇ ಆಗಿದೆ.


ಆರು ವರ್ಷಗಳ ಪರಸ್ಪರ ಪ್ರೀತಿಸಿ ಇತ್ತೀಚೆಗಷ್ಟೇ ದೀಪಿಕಾ-ರಣವೀರ್ ಮದುವೆಯಾಗಿದ್ದರು. ಇದೀಗ ಮದುವೆಯಾದ ಮೇಲೆ ರಣವೀರ್ ಜೀವನದಲ್ಲಿ ಸ್ವಲ್ಪ ಬದಲಾವಣೆಯಾಗಿದೆಯಂತೆ. ಮದುವೆ ಬಳಿಕ ದೀಪಿಕಾ ರಣವೀರ್ ಗೆ ಈ ಮೂರು ವಿಚಾರದಲ್ಲಿ ಕಟ್ಟುನಿಟ್ಟಾಗಿ ತಾನು ಹೇಳಿದಂತೆ ಕೇಳಬೇಕೆಂದು ಕಟ್ಟಪ್ಪಣೆ ಮಾಡಿದ್ದಾರಂತೆ. ಅವು ಯಾವುವು ಎಂದು ರಣವೀರ್ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ.

‘ಲೇಟ್ ಆಗಿ ಮನೆಗೆ ಬರುವುದು, ತಿಂಡಿ ತಿನ್ನದೇ ಮನೆಯಿಂದ ಹೊರಗೆ ಹೋಗುವುದು ಮತ್ತು ಹೊರಗೆ ಹೋದ ಮೇಲೆ ಫೋನ್ ಕಾಲ್ ಸ್ವೀಕರಿಸದೇ ಇರುವುದು. ಈ ಮೂರು ವಿಚಾರವನ್ನು ತಪ್ಪಿಯೂ ಮಾಡಬಾರದು ಎಂದು ದೀಪಿಕಾ ತನಗೆ ಕಟ್ಟಪ್ಪಣೆ ಮಾಡಿದ್ದಾಳೆ’ ಎಂದು ರಣವೀರ್ ಹೇಳಿಕೊಂಡಿದ್ದಾರೆ. ಮದುವೆಯಾದ ಮೇಲೆ ಸೆಲೆಬ್ರಿಟಿಯಾದರೇನು? ಸಾಮಾನ್ಯನಾದರೇನು? ಗಂಡ ಗಂಡನೇ ತಾನೇ?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತೀವ್ರ ಅಸ್ವಸ್ಥ