Publish Date: Mon, 15 Jun 2020 (10:16 IST)
Updated Date: Mon, 15 Jun 2020 (10:19 IST)
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡು ತನ್ನ ಜೀವನವನ್ನು ಕೊನೆಗಾಣಿಸಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಈಗ ಎಲ್ಲರಿಗೂ ಗೊತ್ತಿದೆ. ಆದರೆ ಅವರು ಹಾಗೆ ಆಗುವುದಕ್ಕೆ ಕಾರಣವೇನಿರಬಹುದು ಎಂಬುದನ್ನು ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಹೇಳಿದ್ದಾರೆ.
ಸುಶಾಂತ್ ಗೆ ಶ್ರದ್ಧಾಂಜಲಿ ಅರ್ಪಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಚಂದನ್, ಇಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ನಟರು ಮಾನಸಿಕ ಖಿನ್ನತೆಗೊಳಗಾಗಲು ಮುಖ್ಯ ಕಾರಣ ಅಭದ್ರತೆ. ಅದು ಆಗಿದ್ದು ಈ ಲಾಕ್ ಡೌನ್ ನಿಂದಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ಸಿನಿಮಾ ಕೆಲಸಗಳು ನಿಂತವು. ಹಲವು ಕಲಾವಿದರಿಗೆ ಇದರಿಂದ ಉದ್ಯೋಗ ಭದ್ರತೆ, ಅವಕಾಶದ ಬಗ್ಗೆ ಭಯ ಶುರುವಾಗಿದೆ. ಈ ಸಮಯದಲ್ಲಿ ಆಪ್ತರಾದವರು ಜತೆಗೆ ನಿಂತು ಧೈರ್ಯ ತುಂಬಬೇಕು. ಇಲ್ಲದೇ ಹೋದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಬಹುಶಃ ಸುಶಾಂತ್ ಗೂ ಹೀಗೇ ಆಗಿರಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.