Select Your Language

Notifications

webdunia
webdunia
webdunia
webdunia

ಮತ್ತೊಂದು ಬ್ಲ್ಯಾಕ್ ಸಂಡೇ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

ಮತ್ತೊಂದು ಬ್ಲ್ಯಾಕ್ ಸಂಡೇ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
ಮುಂಬೈ , ಭಾನುವಾರ, 14 ಜೂನ್ 2020 (16:28 IST)
ಮುಂಬೈ: ಕಳೆದ ಭಾನುವಾರವಷ್ಟೇ ಸ್ಯಾಂಡಲ್ ವುಡ್ ನಟ ಚಿರಂಜೀವಿ ಹೃದಯಾಘಾತದಿಂದ ನಿಧನರಾಗಿ ಇಡೀ ಸ್ಯಾಂಡಲ್ ವುಡ್ ನ್ನು ಶೋಕಸಾಗರದಲ್ಲಿ ಮುಳುಗಿಸಿದ್ದರು. ಈ ಭಾನುವಾರ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆಘಾತ ನೀಡಿದ್ದಾರೆ.

 
ಕಳೆದ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ನಟ ಸುಶಾಂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ಎಂಎಸ್ ಧೋನಿ ಕುರಿತಾದ ಬಯೋಪಿಕ್ ಸಿನಿಮಾದಲ್ಲಿ ಧೋನಿಯ ಪಾತ್ರದ ಮೂಲಕ ಮನೆ ಮಾತಾಗಿದ್ದರು. ಬಳಿಕ ಕೇದರನಾಥ್ ಸಿನಿಮಾದಲ್ಲಿನ ನಟನೆ ಮೂಲಕ ಗಮನ ಸೆಳೆದಿದ್ದರು.

ಸುಶಾಂತ್ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಮನೆಯ ನೌಕರ ಇದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ತೋಟದಲ್ಲಿ ತರಕಾರಿ ಬೆಳೆದು ರೈತನಾದ ರಿಯಲ್ ಸ್ಟಾರ್ ಉಪೇಂದ್ರ