Publish Date: Thu, 04 Jun 2020 (09:13 IST)
Updated Date: Thu, 04 Jun 2020 (09:16 IST)
ಮಲಪ್ಪುರಂ: ಕೇರಳದ ಮಲಪ್ಪುರದಲ್ಲಿ ಹಸಿದು ಬಂದ ಆನೆಯೊಂದಕ್ಕೆ ಸ್ಪೋಟಕ ತುಂಬಿದ ಪೈನಾಪಲ್ ನೀಡಿ ಹತ್ಯೆ ಮಾಡಿದ ಕ್ರೂರಿಗಳ ವಿರುದ್ಧ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಧ್ವನಿಯೆತ್ತಿದ್ದಾರೆ.
ನಟಿ ಅನುಷ್ಕಾ ಶರ್ಮಾ, ಜಾನ್ ಅಬ್ರಹಾಂ, ವಿರಾಟ್ ಕೊಹ್ಲಿ, ರಶ್ಮಿಕಾ ಮಂದಣ್ಣ ಸೇರಿದಂತೆ ಬಾಲಿವುಡ್, ಸ್ಯಾಂಡಲ್ ವುಡ್ ನಟ-ನಟಿಯರು ಈ ಕ್ರೂರ ಹತ್ಯೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೇರಳ ಸಿಎಂ ಪಿಣರಾಯ್ ವಿಜಯನ್ ಅವರಿಗೆ ಟ್ಯಾಗ್ ಮಾಡಿ ಸುದೀರ್ಘ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕರಲ್ಲಿ ಈ ವಿಚಾರದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.