Publish Date: Tue, 02 Jun 2020 (21:43 IST)
Updated Date: Tue, 02 Jun 2020 (21:45 IST)
ಪಾಪಿ ಮಗನೊಬ್ಬ ತನ್ನ ಹೆತ್ತವರನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ.
ಕಬ್ಬಿಣದ ರಾಡ್ನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿ ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ.
ರಾಡ್ ನಿಂದ ಹೊಡೆದು ಹೆತ್ತವರನ್ನೇ ಮಗ ಹತ್ಯೆಗೈದಿದ್ದಾನೆ. ರಮೇಶ್ ಮಡಿವಾಳರ (26) ಹೆತ್ತ ತಂದೆ -ತಾಯಿ ಇಬ್ಬರನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಅಕ್ಕಮ್ಮ (46) ಹಾಗೂ ಗಿರಿಯಪ್ಪ (56) ನತದೃಷ್ಟ ತಂದೆ ತಾಯಿಯರಾಗಿದ್ದಾರೆ. ರಮೇಶ್ನ ಪತ್ನಿಯನ್ನು ಮನೆಗೆ ಕರೆತರುವ ವಿಚಾರಕ್ಕೆ ಮನೆಯಲ್ಲಿ ಕುಟುಂಬ ಕಲಹ ನಡೆದಿದೆ. ಆರೋಪಿ ರಮೇಶ ಹಾಗೂ ತಂದೆ- ತಾಯಿ ನಡುವೆ ಗಲಾಟೆಯಾಗಿದೆ. ಜಗಳ ತಾರಕಕ್ಕೇರಿದ್ದು, ರಾಡ್ನಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ.
ಕನಕಗಿರಿ ಸಿಪಿಐ ಸುರೇಶ್ ತಳವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.