Daily Horoscope

Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ವೇಳೆ ಮನೆಗೆ ಬಂದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ

ಹೈದರಾಬಾದ್
ಹೈದರಾಬಾದ್ : ಲಾಕ್ ಡೌನ್ ವೇಳೆ ಮನೆಗೆ ಬಂದ 13 ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ನಡೆದಿದೆ.


ಸಂತ್ರಸ್ತೆ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿದ್ದಾಳೆ. ಆದರೆ ಲಾಕ್ ಡೌನ್ ನಿಂದಾಗಿ ಮನೆಗೆ ಬಂದ ವೇಳೆ 35 ವರ್ಷದ ತಂದೆಯೇ ಆಕೆಗೆ ಕೊಲೆ ಮಾಡುವುದಾಗಿ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ. ಆರೋಪಿ ತಂದೆ ಈಗಾಗಲೇ 4 ಮದುವೆಯಾಗಿದ್ದು, ಸಂತ್ರಸ್ತೆ ಮೂರನೇ ಪತ್ನಿಯ ಮಗಳಾಗಿದ್ದಾಳೆ. ಆಕೆಯ ತಾಯಿ ತೀರಿಕೊಂಡ ಪರಿಣಾಮ ಆಕೆ ತಂದೆಯ ನಾಲ್ಕನೇ ಪತ್ನಿಯ ಜೊತೆ ವಾಸವಾಗಿದ್ದಳು.


ಈ ವಿಚಾರವನ್ನು ಆಕೆ ಮಲತಾಯಿಯ ಬಳಿ ಹೇಳಿಕೊಂಡ ಕಾರಣ ಆಕೆ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BSY ನಮ್ಮ ನಾಯಕರಲ್ಲ ಎಂದವರಿಗೆ ಸಿಎಂ ಹೇಳಿದ್ದೇನು?