Publish Date: Wed, 03 Jun 2020 (09:34 IST)
Updated Date: Wed, 03 Jun 2020 (09:36 IST)
ಮಲಪ್ಪುರಂ: ಹಸಿದು ಬಂದಿದ್ದ ಆನೆಗೆ ಸ್ಪೋಟಕ ಲೇಪಿತ ಪೈನಾಪಲ್ ಹಣ್ಣು ಸೇವಿಸಲು ನೀಡಿ ಗ್ರಾಮಸ್ಥರು ಕೊಂದ ಅಮಾನವೀಯ ಘಟನೆ ಕೇರಳದ ಮಲಪ್ಪುರದಲ್ಲಿ ನಡೆದಿದೆ.
ಈ ಫೋಟೋಗಳನ್ನು ಅರಣ್ಯಾಧಿಕಾರಿಯೊಬ್ಬರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಟ್ರೆಂಡ್ ಆಗಿದೆ. ಅಮಾನವೀಯ ಕೃತ್ಯವೆಸಗಿದ ಜನರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಆನೆ ನೀರಿನಲ್ಲಿ ಸಿಲುಕಿಕೊಂಡಿತ್ತು. ಇದಕ್ಕೆ ಸ್ಪೋಟಕ ತುಂಬಿದ ಅನಾನಸು ಹಣ್ಣು ನೀಡಿ ಗ್ರಾಮಸ್ಥರು ಕ್ರೂರ ಕೃತ್ಯವೆಸಗಿದ್ದಾರೆ. ಮನುಷ್ಯರ ಈ ಕ್ರೂರಾಲೋಚನೆ ಅರಿಯದ ಆನೆ ಹಣ್ಣು ಸೇವಿಸಿದ್ದು, ಬಾಯಿಯಲ್ಲೇ ಸ್ಪೋಟಕ ಸಿಡಿದಿದೆ. ಈ ವೇಳೆ ಅಪಾರ ನೋವು, ಹಿಂಸೆ ಪಟ್ಟ ಆನೆ ಮೃತಪಟ್ಟಿದೆ. ಈ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.