Publish Date: Sat, 06 Jun 2020 (12:13 IST)
Updated Date: Sat, 06 Jun 2020 (12:16 IST)
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಮತ್ತೆ ಅಭಿಮಾನಿಗಳ ಹೃದಯ ಗೆಲ್ಲುವ ಕೆಲಸ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಸೋನು ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿ ಸುದ್ದಿಯಾಗಿದ್ದರು.
ಇದೀಗ ಸೋನು ವಲಸೆ ಕಾರ್ಮಿಕರನ್ನು ವಿಮಾನ ಯಾನದ ಮೂಲಕ ತವರಿಗೆ ಕಳುಹಿಸಿ ಸುದ್ದಿಯಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ 173 ಮಂದಿ ಕಾರ್ಮಿಕರನ್ನು ಹೊತ್ತ ವಿಮಾನ ಡೆಹ್ರಾಡೂನ್ ಗೆ ತೆರಳಿದೆ.
ಇವರನ್ನು ಕೊಂಡೊಯ್ಯುವ ವೆಚ್ಚವನ್ನು ಸೋನು ಸೂದ್ ಭರಿಸಿದ್ದಾರೆ. ಈ ಮೂಲಕ ಸೋನು ಮತ್ತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.