Publish Date: Tue, 02 Jun 2020 (12:09 IST)
Updated Date: Tue, 02 Jun 2020 (12:11 IST)
ಮುಂಬೈ: ನಿನ್ನೆಯಷ್ಟೇ ಕೊರೋನಾದಿಂದಾಗಿ ಸಾವನ್ನಪ್ಪಿದ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ತಾಯಿಗೂ ಈಗ ಸೋಂಕು ತಗುಲಿದ ಶಂಕೆ ವ್ಯಕ್ತವಾಗಿದೆ.
ಕಿಡ್ನಿ ಸಮಸ್ಯೆ ಮತ್ತು ಕೊರೋನಾ ಸೋಂಕಿನಿಂದಾಗಿ ವಾಜಿದ್ ಖಾನ್ ನಿನ್ನೆ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದರು. ಇದೀಗ ಅವರ ತಾಯಿಗೂ ಕೊರೋನಾ ಸೋಂಕು ತಗುಲಿದ ಎಂಬ ಶಂಕೆ ವ್ಯಕ್ತವಾಗಿದೆ.
ವಾಜಿದ್ ರನ್ನು ನೋಡಿಕೊಳ್ಳುತ್ತಿದ್ದ ತಾಯಿ ರಝಿನಾ ಸದ್ಯಕ್ಕೆ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪರಿಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.