Publish Date: Mon, 15 Jun 2020 (08:52 IST)
Updated Date: Mon, 15 Jun 2020 (08:53 IST)
ಮುಂಬೈ: ಛಿಛೋರೆ ಎಂಬ ಕಳೆದ ವರ್ಷ ಬಿಡುಗಡೆಯಾಗಿದ್ದ ಬಾಲಿವುಡ್ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅನಿರುದ್ಧ್ ಪಾಠಕ್ ಎಂಬ ಪಾತ್ರ ಮಾಡಿದ್ದರು.
ಆ ಪಾತ್ರದಲ್ಲಿ ಅವರು ತಮ್ಮ ಆತ್ಮಹತ್ಯೆಗೆ ಪ್ರಯತ್ನಿಸಿದ ಮಗನಿಗೆ ಸಮಾಧಾನ ಹೇಳುತ್ತಾ ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಎಲ್ಲರಿಗೂ ಸಂದೇಶ ನೀಡುತ್ತಾರೆ.
ಆದರೆ ವಿಪರ್ಯಾಸವೆಂದರೆ ನಿಜ ಜೀವನದಲ್ಲಿ ಈ ಪಾಠವನ್ನು ಅವರು ಕಲಿತುಕೊಳ್ಳಲಿಲ್ಲ. ಬದಲಾಗಿ ಮಾನಸಿಕ ಒತ್ತಡವನ್ನು ನಿಭಾಯಿಸಲಾಗದೇ ಜೀವನ ಕೊನೆಗಾಣಿಸಿದ್ದಾರೆ.