Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಪ್ರಕರಣ ‘ಇಡಿ’ಗೆ ಹಸ್ತಾಂತರವಾಗದಿರಲು ಕಾರಣವೇನು?

ಡಿಕೆ ಶಿವಕುಮಾರ್ ಪ್ರಕರಣ ‘ಇಡಿ’ಗೆ ಹಸ್ತಾಂತರವಾಗದಿರಲು ಕಾರಣವೇನು?
ಬೆಂಗಳೂರು , ಶುಕ್ರವಾರ, 22 ಜೂನ್ 2018 (08:59 IST)
ಬೆಂಗಳೂರು: ಆಪ್ತರ ಮೂಲಕ ಹವಾಲಾ ದಂಧೆ ನಡೆಸುತ್ತಿದ್ದಾರೆಂದು ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ಆರೋಪ ಹೊರಿಸಿದ್ದರೂ, ಇನ್ನೂ ಪ್ರಕರಣ ಜಾರಿ ನಿರ್ದೇಶನಾಲಯ (ಇಡಿ) ಗೆ ಹಸ್ತಾಂತರವಾಗಿಲ್ಲ.

ಇದಕ್ಕೆ ಕಾರಣವೇನು ಗೊತ್ತಾ? ಇದುವರೆಗೆ ಈ ಪ್ರಕರಣದ ಬಗ್ಗೆ ಎಫ್ ಐಆರ್ ದಾಖಲಾಗದೇ ಇರುವುದರಿಂದ ಜಾರಿ ನಿರ್ದೇಶನಾಲಯಕ್ಕೆ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ.

ಅಷ್ಟೇ ಅಲ್ಲದೆ, ಐಟಿ ಇಲಾಖೆ ಕೂಡಾ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿಲ್ಲ. ಸ್ವತಃ ಜಾರಿ ನಿರ್ದೇಶನಾಲಯ ಪ್ರಕರಣವನ್ನು ತಮಗೆ ಹಸ್ತಾಂತರಿಸುವಂತೆ ಮನವಿ ಮಾಡಿದೆ. ಒಂದು ವೇಳೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಮುಂದಾಗಿ ಆರೋಪಕ್ಕೆ ಪುರಾವೆ ಸಿಕ್ಕರೆ ಪ್ರಕರಣ ಮತ್ತಷ್ಟು ಗಂಭೀರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ಸರ್ಕಾರ ಬೀಳಿಸಿದ್ದರ ಹಿಂದಿನ ರಹಸ್ಯ ಕೊನೆಗೂ ಬಯಲು!