Select Your Language

Notifications

webdunia
webdunia
webdunia
webdunia

ಹೋಟೆಲ್ ರೂಂ ಸಿಗಲಿಲ್ಲ, ಅದಕ್ಕೇ ಡೆಲ್ಲಿಯಲ್ಲಿ ಫ್ಲ್ಯಾಟ್ ತಗೊಂಡಿದ್ದೆ: ಡಿಕೆಶಿ ಸಮಜಾಯಿಷಿ

ಹೋಟೆಲ್ ರೂಂ ಸಿಗಲಿಲ್ಲ, ಅದಕ್ಕೇ ಡೆಲ್ಲಿಯಲ್ಲಿ ಫ್ಲ್ಯಾಟ್ ತಗೊಂಡಿದ್ದೆ: ಡಿಕೆಶಿ ಸಮಜಾಯಿಷಿ
ಬೆಂಗಳೂರು , ಗುರುವಾರ, 21 ಜೂನ್ 2018 (11:19 IST)
ಬೆಂಗಳೂರು: ದೆಹಲಿಯ ತಮ್ಮ ಫ್ಲ್ಯಾಟ್ ಮೇಲೆ ನಡೆದ ಐಟಿ ದಾಳಿ ಮತ್ತು ಆರೋಪಗಳಿಗೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ಕೂಲ್ ಆಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ನನಗೆ ಹೋಟೆಲ್ ರೂಂ ಸಿಗಲಿಲ್ಲ. ಅದಕ್ಕೆ ಸಣ್ಣದೊಂದು ಫ್ಲ್ಯಾಟ್ ತಗೊಂಡಿದ್ದೆ. ಆದರೆ ಇಲ್ಲಿಗೆ ಹಣ ಹೇಗೆ ಬಂತು ಎಂದು ನನಗೆ ಗೊತ್ತಿಲ್ಲ. ನಾನು ಹೈಕಮಾಂಡ್ ಗೆ ದುಡ್ಡುಕೊಟ್ಟಿಲ್ಲ. ಹಣದ ವ್ಯವಹಾರದ ವಿಚಾರವೇ ನನಗೆ ಗೊತ್ತಿಲ್ಲ. ಎಲ್ಲದಕ್ಕೂ ಶುಭಗಳಿಗೆ ಬರುತ್ತೆ. ಅದಕ್ಕಾಗಿ ಕಾಯಬೇಕು’ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ವೇಳೆ ಐಟಿ ಇಲಾಖೆಯ ನೋಟಿಸ್ ಅಥವಾ ಕೋರ್ಟ್ ನಿಂದ ಇದುವರೆಗೆ ನೋಟಿಸ್ ನನಗೆ ಬಂದಿಲ್ಲ. ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿರುವ ಡಿಕೆಶಿ, ಎಲ್ಲವನ್ನೂ ನೀವು ಮಾಧ್ಯಮಗಳೇ ಮಾಡುತ್ತೀರಿ. ಬೇರೆ ಬೇರೆ ಸುದ್ದಿ, ವಿಡಿಯೋ ತೋರಿಸಿ ಜನರನ್ನು ಸಂತೋಷಪಡಿಸುತ್ತೀರಿ. ಜನರನ್ನು ಸಂತೋಷ ಪಡಿಸುವುದೇ ಒಳ್ಳೆ ಕೆಲ್ಸ ಎಂದು ವ್ಯಂಗ್ಯವಾಗಿ ಮಾಧ್ಯಮಗಳಿಗೆ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನೇ ಡಿಕೆ ಶಿವಕುಮಾರ್ ರಾಜೀನಾಮೆ ಕೇಳುವೆ : ಸಿಎಂ ಎಚ್ ಡಿಕೆ