Publish Date: Thu, 21 Jun 2018 (09:20 IST)
Updated Date: Thu, 21 Jun 2018 (09:25 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿ ವಿಡಿಯೋವೊಂದು ಇದೀಗ ಮಕ್ಕಳ ಹಕ್ಕುಗಳ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದೆ.
ತಮ್ಮ ಟ್ವಿಟರ್ ಪೇಜ್ ನಲ್ಲಿ ರಾಹುಲ್, ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಒಬ್ಬ ರೈತನ ಹೊಲದಲ್ಲಿರುವ ಬಾವಿಯಲ್ಲಿ ಸ್ನಾನ ಮಾಡಿದ ತಪ್ಪಿಗೆ ಇಬ್ಬರು ಅಪ್ರಾಪ್ತ ಹುಡುಗರನ್ನು ಬಟ್ಟೆ ಬಿಚ್ಚಿಸಿ ಥಳಿಸುವ ವಿಡಿಯೋವೊಂದನ್ನು ಪ್ರಕಟಿಸಿದ್ದರು.
ಈ ವಿಡಿಯೋದಲ್ಲಿ ಅಪ್ರಾಪ್ತ ಬಾಲಕರ ಮುಖ ಗುರುತು ಸಿಗುವಂತೆ ವಿಡಿಯೋ ಪ್ರಕಟಿಸಿದ್ದರು. ಇದೇ ಕಾರಣಕ್ಕೆ ಮಕ್ಕಳ ಹಕ್ಕುಗಳ ಸಮಿತಿ ರಾಹುಲ್ ಗಾಂಧಿ ಮತ್ತು ಟ್ವಿಟರ್ ಗೆ 10 ದಿನಗಳೊಳಗಾಗಿ ಉತ್ತರಿಸುವಂತೆ ನೋಟಿಸ್ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.