Select Your Language

Notifications

webdunia
webdunia
webdunia
webdunia

ಅತೃಪ್ತ ಎಚ್ ಕೆ ಪಾಟೀಲ್ ರನ್ನು ರಾಹುಲ್ ಬಳಿ ಕರೆದೊಯ್ದ ಕೆಸಿ ವೇಣುಗೋಪಾಲ್

ಅತೃಪ್ತ ಎಚ್ ಕೆ ಪಾಟೀಲ್ ರನ್ನು ರಾಹುಲ್ ಬಳಿ ಕರೆದೊಯ್ದ ಕೆಸಿ ವೇಣುಗೋಪಾಲ್
ಬೆಂಗಳೂರು , ಮಂಗಳವಾರ, 19 ಜೂನ್ 2018 (09:04 IST)
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ.

ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ಪಾಟೀಲ್ ರನ್ನು ರಾಹುಲ್ ಗಾಂಧಿ ಭೇಟಿ ಮಾಡಿಸುವುದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹೇಳಿದ್ದರು.

ಅದರಂತೆ ನಿನ್ನೆ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಎಚ್ ಕೆ ಪಾಟೀಲ್ ಸಚಿವ ಸ್ಥಾನ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ದೂರಿದ್ದಾರೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಕೇವಲ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲೂ ಈಶ್ವರ ಖಂಡ್ರೆ ಶ್ರಮದಿಂದ ಸಚಿವ ಸ್ಥಾನ ಇವರಿಗೆ ಸಿಕ್ಕಿದೆ. ಹಾಗಿದ್ದರೂ ಈಶ್ವರ ಖಂಡ್ರೆ ಅವರನ್ನು ಅವಗಣಿಸಲಾಗಿದೆ ಎಂದು ರಾಹುಲ್ ಬಳಿ ಪಾಟೀಲ್ ದೂರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ ದೂರಿದ್ದಕ್ಕೆ ಕೆಸಿ ವೇಣುಗೋಪಾಲ್ ಮೇಲೆ ಸಿದ್ದರಾಮಯ್ಯ ಕೆಂಡ?!