Select Your Language

Notifications

webdunia
webdunia
webdunia
webdunia

ಎಚ್ ಡಿ ರೇವಣ್ಣ-ಡಿಕೆಶಿ ಮುನಿಸು ಪತ್ರಕರ್ತರ ಎದುರೇ ಬಯಲು

ಎಚ್ ಡಿ ರೇವಣ್ಣ-ಡಿಕೆಶಿ ಮುನಿಸು ಪತ್ರಕರ್ತರ ಎದುರೇ ಬಯಲು
ಬೆಂಗಳೂರು , ಗುರುವಾರ, 21 ಜೂನ್ 2018 (09:59 IST)
ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ರೇವಣ್ಣ ತಮ್ಮ ಇಲಾಖೆಯಲ್ಲೂ ಹಸ್ತಕ್ಷೇಪ ನಡೆಸುತ್ತಾರೆಂದು ಅಸಮಾಧಾನಗೊಂಡಿದ್ದಸಚಿವ ಡಿಕೆ ಶಿವಕುಮಾರ್ ಅಸಮಾಧಾನ ಪತ್ರಿಕಾಗೋಷ್ಠಿಯಲ್ಲೇ ಬಯಲಾದ ಘಟನೆ ನಡೆದಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಎಂ ವೀರಪ್ಪ ಮೊಯಿಲಿ ಮಾತನಾಡುತ್ತಿರುವಾಗ ನಡುವೆ ಬಂದ ಜೆಡಿಎಸ್ ನ ಎಚ್ ಡಿ ರೇವಣ್ಣ ಜೆಡಿಎಸ್ ಕಾರ್ಯಕ್ರಮಗಳ ಬಗ್ಗೆ ಮಾತನಾಡಲು ಶುರು ಮಾಡಿದಾಗ ಡಿಕೆಶಿ ಅಸಮಾಧಾನಗೊಂಡರು.

ಅದನ್ನೆಲ್ಲಾ ಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದು ಡಿಕೆಶಿ ಮಧ್ಯದಿಂದಲೇ ಎದ್ದು ಹೋದರು. ಕೆಲವು ಕ್ಷಣಗಳ ನಂತರ ಮತ್ತೆ ಪತ್ರಿಕಾಗೋಷ್ಠಿಗೆ ಬಂದರು. ಈ ಮೂಲಕ ಮಾಧ್ಯಮಗಳ ಎದುರೇ ಇವರ ವೈಮನಸ್ಯ ಬಯಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಸರ್ಕಾರ ಮುರಿದುಬೀಳುವುದರ ಹಿಂದೆ ದೊಡ್ಡ ಸೀಕ್ರೆಟ್!