Publish Date: Wed, 20 Jun 2018 (10:07 IST)
Updated Date: Wed, 20 Jun 2018 (10:09 IST)
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ದೆಹಲಿಯ ನಿವಾಸಗಳ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳಿಗೆ ಸಿಕ್ಕಿದ್ದ 8 ಕೋಟಿಗೂ ಅಧಿಕ ಹಣ ಡಿಕೆಶಿಗೆ ಸೇರಿದ್ದು ಎಂದು ಪ್ರಕರಣದ ನಾಲ್ಕನೇ ಆರೋಪಿ ಆಂಜನೇಯ ಹೇಳಿಕೊಂಡಿದ್ದಾರೆ.
ನನ್ನ ಮನೆಯಲ್ಲಿದ್ದ ಹಣ ಡಿಕೆಶಿಗೆ ಸೇರಿದ್ದು ಎಂದು ಕರ್ನಾಟಕ ಭವನದ ಅಧಿಕಾರಿ ಆಂಜನೇಯ ಹೇಳಿದ್ದಾರೆ. ಎಐಸಿಸಿಗೆ ಕೊಡಲು ಹಣ ರವಾನಿಸಿದ್ದರು. ಆದರೆ ಇದು ತನ್ನ ಕೃಷಿ ಮೂಲಗಳಿಂದ ಬಂದ ಆದಾಯ ಎಂದು ಕೆಲವು ದಿನಗಳ ಕಾಲಾವಕಾಶದ ನಂತರ ಡಿಕೆಶಿ ಹೇಳಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಬೇರೆಯವರ ಮೂಲಕ ಡಿಕೆಶಿ ಹಣ ರವಾನಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಪ್ರಕರಣವೀಗ ಡಿಕೆಶಿಗೆ ಮತ್ತಷ್ಟು ಉರುಳಾಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.