Publish Date: Wed, 20 Jun 2018 (12:18 IST)
Updated Date: Wed, 20 Jun 2018 (12:20 IST)
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಿದ್ದಂತೇ ಸಿಎಂ ಕುಮಾರಸ್ವಾಮಿಗೆ ಹೊಸ ತಲೆನೋವು ಶುರುವಾಗಿದೆ.
ತಮ್ಮ ಸರ್ಕಾರದ ಸಚಿವರು ಅವ್ಯವಹಾರ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಸುದ್ದಿ ತಿಳಿಯುತ್ತಿದ್ದಂತೇ ವಿಧಾನಸೌಧಕ್ಕೆ ಬರುತ್ತಿದ್ದ ಸಿಎಂ ಕುಮಾರಸ್ವಾಮಿ ದಿಡೀರ್ ಮಾರ್ಗ ಬದಲಿಸಿದ್ದಾರೆ.
ವಿಧಾನಸೌಧದಲ್ಲಿ ನಡೆಯಬೇಕಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ತಮ್ಮ ಕಾರಿನಲ್ಲಿ ಜೆಪಿ ನಗರ ನಿವಾಸದಿಂದ ಬರುತ್ತಿದ್ದ ಸಿಎಂ, ದಿಡೀರ್ ಮಾರ್ಗ ಬದಲಾಯಿಸಿ ತಂದೆ, ಜೆಡಿಎಸ್ ವರಿಷ್ಠ ದೇವೇಗೌಡರ ಪದ್ಮನಾಭನಗರ ನಿವಾಸದತ್ತ ತೆರಳಿದ್ದಾರೆ. ಈ ವಿಚಾರದ ಬಗ್ಗೆ ದೇವೇಗೌಡರ ಜತೆ ಸಿಎಂ ಕುಮಾರಸ್ವಾಮಿ ಚರ್ಚಿಸಿ ಮುಂದಿನ ಹೆಜ್ಜೆಗಳನ್ನಿಡಲಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.