Publish Date: Fri, 22 Jun 2018 (08:52 IST)
Updated Date: Fri, 22 Jun 2018 (08:53 IST)
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸಲು ತನಗೆ ಪ್ರಕರಣ ವರ್ಗಾಯಿಸುವಂತೆ ಜಾರಿ ನಿರ್ದೇಶನಾಲಯ ಕೇಳಿಕೊಂಡಿದೆ. ಆದರೆ ಐಟಿ ಇಲಾಖೆ ನಿರಾಕರಿಸಿದೆ.
ಅತ್ತ ಹವಾಲಾ ಚಟುವಟಿಕೆ ಆರೋಪ ಕೇಳಿಬರುತ್ತಿದ್ದಂತೆ ಇಡಿ ಪ್ರಕರಣವನ್ನು ತನಗೆ ವರ್ಗಾಯಿಸುವಂತೆ ಐಟಿ ಇಲಾಖೆಯನ್ನು ಕೇಳಿಕೊಂಡಿತ್ತು. ಆದರೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವ ಕಾರಣ ವರ್ಗಾವಣೆ ಸಾಧ್ಯವಿಲ್ಲ ಎಂದು ನಿರಾಕರಿಸಿದೆ.
ಹಾಗಿದ್ದರೂ ಇಡಿ ಸ್ವಯಂ ಪ್ರೇರಿತವಾಗಿ ಆಂತರಿಕ ತನಿಖೆ ಆರಂಭಿಸಿದೆ. ಯಾರ ಖಾತೆಯಿಂದ ಯಾರಿಗೆ ಎಷ್ಟು ಹಣ ವರ್ಗಾವಣೆಯಾಗಿದೆ ಎಂಬ ಕುರಿತಾಗಿ ಮಾಹಿತಿ ಕಲೆ ಹಾಕುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.