Publish Date: Thu, 21 Jun 2018 (11:28 IST)
Updated Date: Thu, 21 Jun 2018 (11:29 IST)
ಬೆಂಗಳೂರು: ಹೈಕಮಾಂಡ್ ಗೆ ಹವಾಲಾ ಹಣ ರವಾನೆ ಮಾಡಿದ್ದಾರೆಂಬ ಸಚಿವ ಡಿಕೆ ಶಿವಕುಮಾರ್ ಮೇಲಿನ ಗಂಭೀರ ಆರೋಪದ ಬಗ್ಗೆ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ನಾಲ್ಕು ದಿನ ಕಳೆದ ಮೇಲೆ ಪ್ರತಿಕ್ರಿಯಿಸುತ್ತಾರಂತೆ!
ಯಾವ ಕಾರಣಕ್ಕೆ ಈಶ್ವರಪ್ಪ ನಾಲ್ಕು ದಿನಗಳ ಅವಧಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಈ ಪ್ರಕರಣದ ಬಗ್ಗೆ ಈಗಂತೂ ಪ್ರತಿಕ್ರಿಯಿಸದೇ ಇರಲು ತೀರ್ಮಾನಿಸಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರಪ್ಪ ನಿನ್ನೆ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದ ಬೇಳೂರು ಗೋಪಾಲಕೃಷ್ಣ ವಿರುದ್ಧವೂ ತಿರುಗೇಟು ನೀಡಿದ್ದಾರೆ. ರಾಜಕೀಯದಲ್ಲಿ ಹತಾಶೆಗೊಳಗಾದವರು ಇಂತಹ ಹೇಳಿಕೆ ನೀಡುತ್ತಾರೆ. ಅದಕ್ಕೆ ಬೇಳೂರು ಉತ್ತಮ ಉದಾಹರಣೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.