Publish Date: Wed, 02 May 2018 (16:59 IST)
Updated Date: Wed, 02 May 2018 (17:02 IST)
ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ.ದಿವಂಗತ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಪುಟ್ಟಣ್ಣಯ್ಯಗೆ ತಿಥಿ ಚಿತ್ರದ ಪಾತ್ರಧಾರಿ ಸೆಂಚೂರಿಗೌಡ. ಹಸಿರು ಟವಲ್ ಹಾಕಿ ಬೆಂಬಲ ಸೂಚಿಸಿದ್ದಾರೆ.
ವದೆ ಸಮುದ್ರ ಗ್ರಾಮದಲ್ಲಿ ಸೆಂಚೂರಿಗೌಡ ಹೇಳಿಕೆ ನೀಡಿ ಪುಟ್ಟಣ್ಣಯ್ಯನ ಮಗನನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ ಸೆಂಚೂರಿ ಗೌಡ,.ಆಟೋ ರಿಕ್ಷಾ ಗುರುತಿಗೆ ಮತ ನೀಡಿ ಎಂದರು.
ಪುಟ್ಟಣ್ಣಯ್ಯ ಪರ ಜಯಕಾರ ಕೂಗಿದ ಸೆಂಚೂರಿಗೌಡ, ರೈತರ ಹಿತದೃಷ್ಟಿಯಿಂದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.