Publish Date: Mon, 30 Apr 2018 (18:05 IST)
Updated Date: Mon, 30 Apr 2018 (18:06 IST)
ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಮತ್ತೆ ಮತದಾರ ಪ್ರಭು ಕಾರಿಗೆ ಮುತ್ತಿಗೆ ಹಾಕಿ ಬೆವರಿಳಿಸಿದ ಘಟನೆ ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ನಡೆದಿದೆ.
ನನಗೆ ಮತ ನೀಡಿ ಎಂದು ಕೇಳಲು ಹೋಗಿದ್ದ ಖೇಣಿಗೆ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡದಕ್ಕೆ ಖೇಣಿಗೆ ಗ್ರಾಮಸ್ಥರು ಪ್ರಶ್ನೆಗಳ ಸುರಿ ಮಳೆ ಹಾಕಿ ವಿರುದ್ಧ ಘೋಷಣೆ ಕೂಗಿದ್ರು.
ಎರಡನೆಯ ಬಾರಿಗೆ ಗ್ರಾಮದಲ್ಲಿ ತರಾಟೆ ತೆಗೆದುಕೊಂಡಿರುವುದರಿಂದ ಕಕ್ಕಾಬಿಕ್ಕಿಯಾದ ಅಶೋಕ್ ಖೇಣಿ ಕಾರಿನಿಂದ ಕೆಳಗಿಳಿಯದೆ ಮೌನಕ್ಕೆ ಶರಣಾದ್ರು. ಬೀದರ್ ದಕ್ಷಿಣ ಕ್ಷೇತ್ರವನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಹೇಳಿ ಜನರಿಗೆ ಉಲ್ಲೂ ಮಾಡಿದ್ದ ಖೇಣಿಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ.
ಇದರಿಂದ ಖೇಣಿಗೆ ಚುನಾವಣಾ ಭಯ ಶುರುವಾಗಿದ್ದು 5 ವರ್ಷಗಳ ನಂತರ ಮತದಾರ ಪ್ರಭು ಶಾಸಕರಿಗೆ ತರಾಟೆ ತೆಗೆದುಕೊಂಡು ಪ್ರಶ್ನೆ ಮಾಡುತ್ತಿದ್ದಾರೆ.