Publish Date: Sun, 08 Apr 2018 (06:04 IST)
Updated Date: Sun, 08 Apr 2018 (06:08 IST)
ಬೀದರ್ : ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರನ್ನು ಜನರು ಹಿಗ್ಗಾ ಮಗ್ಗಾ ತರಾಟಿಗೆ ತೆಗೆದುಕೊಂಡ ಘಟನೆ ಬೀದರ್ ನ ಬಗದಲ್ ಗ್ರಾಮದಲ್ಲಿ ನಡೆದಿದೆ.
ಶಾಸಕ ಅಶೋಕ್ ಖೇಣಿ ಅವರು ಬಗದಲ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಶಾಸಕರನ್ನು ನೋಡಿದ ಗ್ರಾಮಸ್ಥರು,’ಏನ್ ಸ್ವಾಮೀ ಕ್ಷೇತ್ರವನ್ನು ಮಿನಿ ಸಿಂಗಾಪುರ್ ಮಾಡ್ತೀವಿ ಎಂದು ಹೇಳಿದ್ರಿ, ಈ ರಸ್ತೆ ನೋಡಿ ಇದೇನಾ ಮಿನಿ ಸಿಂಗಾಪುರ್. ಇದೇನಾ ನಿಮ್ ಅಭಿವೃದ್ಧಿ’ ಎಂದು ಪ್ರಶ್ನಿಸುವುದರ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಶಾಸಕ ಅಶೋಕ್ ಖೇಣಿ ಅವರು ಕಕ್ಕಾಬಿಕಿಯಾಗಿ ಕೆಳಗಿಳಿಯದೆ ಕಾರಲ್ಲೇ ಕುಳಿತು ಅಲ್ಲಿಂದ ವಾಪಾಸಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
pavithra
Publish Date: Sun, 08 Apr 2018 (06:04 IST)
Updated Date: Sun, 08 Apr 2018 (06:08 IST)