Publish Date: Sat, 16 Mar 2019 (10:47 IST)
Updated Date: Sat, 16 Mar 2019 (10:49 IST)
ಬೆಂಗಳೂರು: ಪುಟ್ಟ ಗೌರಿ ಮದುವೆ ಧಾರವಾಹಿ ಮೂಲಕ ಪ್ರೇಕ್ಷಕರನ್ನು ಸುಮಾರು 6 ವರ್ಷಗಳ ಕಾಲ ರಂಜಿಸುತ್ತಾ ನಟಿ ರಂಜಿನಿ ರಾಘವನ್ ಇದೀಗ ಡೈರೆಕ್ಟರ್ ಆಗಲು ಹೊರಟಿದ್ದಾರೆ!
ಹೌದು, ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿ ಪುಟ್ಟಗೌರಿ ಮದುವೆ ಮೂಲಕ ವೀಕ್ಷಕರ ಮನೆ ಮಗಳಾದ ಪುಟ್ಟಗೌರಿ ಇದೀಗ ಧಾರವಾಹಿ ನಿರ್ಮಾಣದತ್ತ ಮನಸ್ಸು ಮಾಡಿದ್ದಾರೆ.
ಕಲರ್ಸ್ ವಾಹಿನಿಗಾಗಿಯೇ ಪುಟ್ಟಗೌರಿ ಹೊಸ ಧಾರವಾಹಿ ನಿರ್ಮಿಸಲಿದ್ದು, ಈಗಾಗಲೇ ಅಡಿಷನ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳು ಸದ್ಯದಲ್ಲೇ ಲಭ್ಯವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ