Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಗೆ ತಪರಾಕಿ ನೀಡಿದ ನಟ ಆರ್. ಮಾಧವನ್ ಗೆ ರಾಜಕೀಯ ಪಾಠ ಮಾಡಿದ ಟ್ವಿಟರಿಗರು

ಕಾಂಗ್ರೆಸ್ ಗೆ ತಪರಾಕಿ ನೀಡಿದ ನಟ ಆರ್. ಮಾಧವನ್ ಗೆ ರಾಜಕೀಯ ಪಾಠ ಮಾಡಿದ ಟ್ವಿಟರಿಗರು
ನವದೆಹಲಿ , ಶನಿವಾರ, 16 ಮಾರ್ಚ್ 2019 (09:36 IST)
ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ತಮಾಷೆಯ ವಿಡಿಯೋ ಮಾಡಿ ಹರಿಯಬಿಟ್ಟಿದ್ದನ್ನು ಆಕ್ಷೇಪಿಸಿದ ನಟ ಆರ್. ಮಾಧವನ್ ಗೆ ಟ್ವಿಟರಿಗರು ರಾಜಕೀಯ ಪಾಠ ಮಾಡಿದ್ದಾರೆ.


ನಟ ಮಾಧವನ್ ಕಾಂಗ್ರೆಸ್ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷರ ಜತೆಗೆ ಮಾತನಾಡುವ ವಿಡಿಯೋಕ್ಕೆ ತಮಾಷೆಯ ಸಂಭಾಷಣೆ ಸೇರಿಸಿ ಪ್ರಕಟಿಸಿತ್ತು. ಈ ರೀತಿ ರಾಜಕೀಯ ವೈಷಮ್ಯದ ಹೆಸರಿನಲ್ಲಿ ದೇಶದ ಪ್ರಧಾನಿಯೊಬ್ಬರನ್ನು ಚೀನಾ ಮತ್ತು ದೇಶದ ಎದುರು ಮಾನ ಕಳೆಯುವುದು ಎಷ್ಟು ಸರಿ? ಕಾಂಗ್ರೆಸ್ ಮತ್ತು ಅದರ ಐಟಿ ವಿಭಾಗದಿಂದ ಇಂತಹದ್ದೊಂದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದಕ್ಕೆ ಮಾಧವನ್‍ ಗೆ ತಿರುಗೇಟು ನೀಡಿರುವ ಟ್ವಿಟರ್ ಮಂದಿ ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯ. 2014 ರ ಚುನಾವಣೆಯಲ್ಲಿ ಬಿಜೆಪಿಯೂ ರಾಹುಲ್ ಗಾಂಧಿಯನ್ನು ಇದೇ ರೀತಿ ವಿಡಿಯೋ ಮೂಲಕ ತಮಾಷೆ ಮಾಡಿದ್ದು ನೆನಪಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟೋ ದಿನಗಳ ನಂತರ ಮೋಡಿ ಮಾಡಿದ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡು