Select Your Language

Notifications

webdunia
webdunia
webdunia
Thursday, 10 April 2025
webdunia

ಮಂಡ್ಯದಲ್ಲಿ ನಮ್ಮನ್ನ ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನ 5 ಬಾರಿ ತಬ್ಬಿಕೊಳ್ಳುತ್ತೇವೆ- ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ ಸಾರಾ ಮಹೇಶ್

ಮೈಸೂರು
ಮೈಸೂರು , ಶನಿವಾರ, 16 ಮಾರ್ಚ್ 2019 (09:05 IST)
ಮೈಸೂರು : ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ಎಂದು ಹೇಳುವುದರ ಮೂಲಕ ಸಚಿವ ಸಾರಾ ಮಹೇಶ್ ಪರೋಕ್ಷವಾಗಿ ಕಾಂಗ್ರೆಸ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ.


ನಗರದಲ್ಲಿ ಪ್ರಚಾರ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ, ನಮ್ಮ ಅಂತರ ಇದ್ದೆ ಇರುತ್ತದೆ. ಮೈತ್ರಿಯಾಗಿ ಸರ್ಕಾರ ನಡೆಸುತ್ತಿದ್ದೇವೆ. ಮಂಡ್ಯದಲ್ಲಿ ನಮ್ಮನ್ನ ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನ 5 ಬಾರಿ ತಬ್ಬಿಕೊಳ್ಳುತ್ತೇವೆ. ನಿಮಗೆ ಇದು ನೆನಪಿನಲ್ಲಿ ಇರಲಿ. ಈ ಲೋಕಸಭೆ ಚುನಾವಣೆಯಿಂದಲೇ ಇದು ಪ್ರಾರಂಭವಾಗಬೇಕು. ನಾವು ಜಿಲ್ಲೆಯಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೇ ಸೇವೆ ಮಾಡಿದ್ದೇವೆ. ಆದ್ದರಿಂದ ಮೈತ್ರಿ ಧರ್ಮ ಪಾಲಿಸಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡಿ ಎಂದು ಹೇಳಿದ್ದಾರೆ.


ಹಾಗೇ ಸುಮಲತಾ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು,’ ರಾಜ್ಯದ ಯಾವುದೇ ಪಕ್ಷದ ನೇತಾರರನ್ನಾಗಿ ಮಾಡಿದರೂ ಕೂಡ ಜೆಡಿಎಸ್ ಕಾರ್ಯಕರ್ತರು ನಂಬುವುದು ಎಚ್‍.ಡಿ.ಡಿ ಕುಟುಂಬವನ್ನು ಮಾತ್ರ. ಆದ್ದರಿಂದ ಕಾರ್ಯಕರ್ತರ ಒಪ್ಪಿಗೆ ಮೇರೆಗೆ ಈ ನಿರ್ಧಾರ ಮಾಡಲಾಗಿದೆ. ಆದರೆ ಅಂಬರೀಶ್ ಅವರೇ ರಾಜಕಾರಣ ಬೇಡ ಎಂದ ಮೇಲೆ ನಿಖಿಲ್ ಅವರ ವಿರುದ್ಧ ಏಕೆ ಸ್ಪರ್ಧೆ ಮಾಡುತ್ತಿದ್ದೀರಾ ಎಂದು ಯೋಚಿಸಿ ಎಂದು ಸುಮಲತಾ ಅವರಲ್ಲಿ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ವಿರುದ್ಧ ಹೇಳಿಕೆ ನೀಡಿದ ಎಸ್‍ಎಂ ಕೃಷ್ಣ ಮತ್ತು ಸುಮಲತಾಗೆ ಟ್ವೀಟರ್ ನಲ್ಲಿ ತಿರುಗೇಟು ನೀಡಿದ ಸಿಎಂ