ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಜುಲೈ 19 ರಿಂದ ಆರಂಭವಾಗಬೇಕಿದ್ದ ಹಿಟ್ಲರ್ ಕಲ್ಯಾಣ ಧಾರವಾಹಿ ಇದ್ದಕ್ಕಿದ್ದಂತೆ ಮುಂದೂಡಿಕೆಯಾಗಿದೆ.
ಧಾರವಾಹಿಯ ಶೂಟಿಂಗ್ ವೇಳೆ ನಾಯಕಿ ನಟಿ ಅಪಘಾತವಾಗಿ ಗಾಯಗೊಂಡಿದ್ದ ಸುದ್ದಿಯನ್ನು ವೆಬ್ ದುನಿಯಾ ಮೊನ್ನೆಯೇ ಪ್ರಕಟಿಸಿತ್ತು. ತಲೆಗೆ ಪೆಟ್ಟು ಮಾಡಿಕೊಂಡ ಕಾರಣ ನಾಯಕಿ ಪಾತ್ರಧಾರಿ ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿತ್ತು.
ಇದೀಗ ಧಾರವಾಹಿ ಪ್ರಸಾರ ದಿನಾಂಕ ಮುಂದೂಡಿಕೆಯಾದ ಸುದ್ದಿ ಬಂದಿದೆ. ಆದರೆ ಧಾರವಾಹಿ ತಂಡ ಇದಕ್ಕೆ ಬಹಿರಂಗವಾಗಿ ಕಾರಣ ತಿಳಿಸಿಲ್ಲ. ಆದರೆ ಅಪಘಾತವೇ ಈ ಮುಂದೂಡಿಕೆಗೆ ಕಾರಣ ಎನ್ನಲಾಗಿದೆ.