ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಿಂದ ನಾಯಕಿ ಅನುಸಿರಿಮನೆ ಅಲಿಯಾಸ್ ನಟಿ ಮೇಘಾ ಶೆಟ್ಟಿ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಮೇಘಾ ಈಗಾಗಲೇ ತಮ್ಮ ಕೊನೆಯ ದಿನದ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಳ್ಳಲ್ಲ ಎನ್ನಲಾಗಿದೆ. ಈ ಬಗ್ಗೆ ಧಾರವಾಹಿ ತಂಡವನ್ನು ಸಂಪರ್ಕಿಸಿದಾಗ ಈ ಸುದ್ದಿ ನಿಜ ಎಂದಿದ್ದಾರೆ.
ಹೀಗಾಗಿ ಅನು ಸಿರಿಮನೆ ಪಾತ್ರಕ್ಕೆ ಬೇರೊಬ್ಬ ನಟಿ ಬರುವುದು ಪಕ್ಕಾ ಆಗಿದೆ. ಆದರೆ ಮೇಘಾ ಹೊರಹೋಗುತ್ತಿರುವ ಸುದ್ದಿ ತಿಳಿದು ಅವರ ಅಭಿಮಾನಿ ವರ್ಗ ತೀವ್ರ ಬೇಸರ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮೇಘಾನೇ ಅನು ಸಿರಿಮನೆಯಾಗಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ. ಸೀರಿಯಲ್ ಬಿಡಲು ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ಸ್ವತಃ ಮೇಘಾ ಇನ್ನೂ ಸ್ಪಷ್ಟನೆ ಅಥವಾ ಯಾವುದೇ ಹೇಳಿಕೆ ಕೊಟ್ಟಿಲ್ಲ.