ಹಿಟ್ ಜೋಡಿ ಮಧ್ಯೆ ಬಿರುಕು…!
ಧಾರವಾಹಿಯಿಂದ ಹೊರ ನಡೆದರಾ ನಟಿ ಮೇಘಾ ಶೆಟ್ಟಿ?
Publish Date: Sun, 11 Jul 2021 (08:46 IST)
Updated Date: Sun, 11 Jul 2021 (08:55 IST)
ಜೊತೆಜೊತೆಯಲಿ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್.. ಧಾರವಾಹಿಯಿಂದ ಹೊರ ನಡೆದರಾ ನಟಿ ಮೇಘಾ ಶೆಟ್ಟಿ? ಇನ್ನು ಕೆಲವೇ ದಿನಗಳಲ್ಲಿ ಅನು ಮಾತ್ರಕ್ಕೆ ಬೇರೆ ನಟಿ ಬರುತ್ತಾರಾ? ಕನ್ನಡ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟು ಹಾಕಿದ ಧಾರವಾಹಿ ಜೊತೆಜೊತೆಯಲಿ. ಯುವತಿಯರಿಂದ ಹಿಡಿದು ಮನೆ ಮಂದಿಗೆಲ್ಲಾ ಇಷ್ಟವಾಗಿದ್ದ ಸೀರಿಯಲ್.
ಅನು-ಆರ್ಯವರ್ಧನ್ ಜೋಡಿಗೆ ನೋಡುಗರು ಫಿದಾ ಆಗಿದ್ದರು. ಆರ್ಯವರ್ಧನ್ ಆಗಿ ನಟಿಸಿದ್ದ ನಟ ಅನಿರುದ್ಧ್ ಹಾಗೂ ಅನು ಪಾತ್ರದಲ್ಲಿ ನಟಿಸಿದ್ದ ಮೇಘಾ ಶೆಟ್ಟಿ ಕೆಮಿಸ್ಟ್ರಿ ಸಖತ್ ಆಗೇ ವರ್ಕೌಟ್ ಆಗಿತ್ತು. ಅನಿರುದ್ಧ-ಮೇಘಾ ಶೆಟ್ಟಿ ಕಿರುತೆರೆ ಹಿಟ್ ಪೇರ್ ಎನಿಸಿಕೊಂಡಿತ್ತು. ಆದರೆ ಈಗ ಜೊತೆಜೊತೆಯಲಿ ಧಾರವಾಹಿ ಪ್ರೇಕ್ಷಕರಿಗೆ ನಿರಾಸೆ ಆಗುವ ಸುದ್ದಿಯೊಂದು ಹೊರ ಬಿದ್ದಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಿಂದ ನಟಿ ಮೇಘಾ ಶೆಟ್ಟಿ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಮೇಘಾ ಈಗಾಗಲೇ ತಮ್ಮ ಕೊನೆಯ ದಿನದ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಳ್ಳಲ್ಲ ಎನ್ನಲಾಗಿದೆ.
ಮೇಘಾ ಶೆಟ್ಟಿ ನೆಚ್ಚಿನ ಅನು ಪಾತ್ರಕ್ಕೆ ಗುಡ್ ಬೈ ಹೇಳಿರುವುದಕ್ಕೆ ಅಭಿಮಾನಿಗಳಿಗೆ ಬೇಸರ ತರಿಸಿದೆ. ಮೇಘಾ ಶೆಟ್ಟಿ ಸೀರಿಯಲ್ನಿಂದ ಅರ್ಧಕ್ಕೆ ಹೊರಬರಲು ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಮೇಘಾ ಶೆಟ್ಟಿ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಇನ್ನು ಕೆಲ ದಿನಗಳು ಮಾತ್ರ ಮೇಘಾ ಶೆಟ್ಟಿ ನಟನೆಯ ಎಪಿಸೋಡ್ ಗಳು ಪ್ರಸಾರವಾಗಲಿದೆ. ನಂತರ ಅನು ಮಾತ್ರದಲ್ಲಿ ಬೇರೆ ನಟಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.ಕಿರುತೆರೆಗೆ ಬೈ ಹೇಳಿ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳುತ್ತಾರಾ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ
Ramya kosira
Publish Date: Sun, 11 Jul 2021 (08:46 IST)
Updated Date: Sun, 11 Jul 2021 (08:55 IST)