Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

Exclusive: ಶೂಟಿಂಗ್ ವೇಳೆ ಹಿಟ್ಲರ್ ಕಲ್ಯಾಣ ಧಾರವಾಹಿ ನಟಿಗೆ ಅಪಘಾತ

webdunia
ಶನಿವಾರ, 10 ಜುಲೈ 2021 (12:05 IST)
ಬೆಂಗಳೂರು: ಜೀ ಕನ್ನಡದಲ್ಲಿ ಇನ್ನಷ್ಟೇ ಆರಂಭವಾಗಬೇಕಿರುವ ಹೊಸ ಧಾರವಾಹಿ ‘ಹಿಟ್ಲರ್ ಕಲ್ಯಾಣ’ ಧಾರವಾಹಿ ನಾಯಕಿ ನಟಿಗೆ ಅಪಘಾತವಾಗಿದೆ ಎಂಬ ಸುದ್ದಿ ಹಬ್ಬಿದೆ.


ಶೂಟಿಂಗ್ ಸ್ಥಳದಲ್ಲೇ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಧಾರವಾಹಿ ತಂಡ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಬಲ್ಲ ಮೂಲಗಳಿಂದಷ್ಟೇ ಈ ಮಾಹಿತಿ ಬಂದಿದೆ. ಮೂಲಗಳ ಪ್ರಕಾರ ನಾಯಕಿ ನಟಿ ದೃಶ್ಯವೊಂದರ ಚಿತ್ರೀಕರಣ ವೇಳೆ ಸ್ಕೂಟಿಯಿಂದ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಜುಲೈ 19 ರಿಂದ ಧಾರವಾಹಿ ಪ್ರಸಾರ ಆರಂಭವಾಗಲಿದ್ದು, ಖ್ಯಾತ ನಟ ದಿಲೀಪ್ ರಾಜ್ ನಾಯಕ ಮತ್ತು ಈ ಧಾರವಾಹಿಯ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಪ್ರೋಮೋ ಕೂಡಾ ಹರಿಯಬಿಡಲಾಗಿದೆ. ಆದರೆ ಧಾರವಾಹಿ ಆರಂಭಕ್ಕೂ ಮುನ್ನವೇ ಚಿತ್ರೀಕರಣ ವೇಳೆ ಅಪಘಾತ ನಡೆದಿದೆಯೆಂಬ ಸುದ್ದಿ ನಿಜಕ್ಕೂ ಆಘಾತಕಾರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ನಾನು ರಾಜಕೀಯ ಮಾತಾಡಲ್ಲ, ಯಾರಿಗೂ ಹರ್ಟ್ ಮಾಡಲ್ಲ: ರಾಕ್ ಲೈನ್ ವೆಂಕಟೇಶ್