Publish Date: Tue, 26 Dec 2017 (11:00 IST)
Updated Date: Tue, 26 Dec 2017 (11:04 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರೆಲ್ಲರೂ ಜನಪ್ರಿಯರೇ. ಹಾಗಾಗಿ ಈ ವಾರ ಯಾರೇ ಮನೆಯಿಂದ ಹೊರ ಹೋದರೂ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ ಎನ್ನುವಂತಾಗಿದೆ.
ಈ ವಾರ ಮನೆಯಿಂದ ಹೊರ ಹೋಗಲು ಜಯಶ್ರೀನಿವಾಸನ್, ಕೃಷಿ ತಾಪಂಡ, ಸಮೀರ್ ಆಚಾರ್ಯ, ನಿವೇದಿತಾ ಮತ್ತು ದಿವಾಕರ್ ನಾಮಿನೇಟ್ ಆಗಿದ್ದಾರೆ.
ಇವರ ಪೈಕಿ ನಿವೇದಿತಾ ಮತ್ತು ದಿವಾಕರ್ ಬಗ್ಗೆ ವೀಕ್ಷಕರಲ್ಲಿ ಹೆಚ್ಚು ಒಲವಿದೆ. ಇನ್ನು ಮನರಂಜನೆ ಕೊಡುವ ಜಯ ಶ್ರೀನಿವಾಸನ್ ಮತ್ತು ಸಮೀರ್ ಆಚಾರ್ಯಗೂ ವೀಕ್ಷಕರ ಮತ ಬೀಳುವ ಸಂಭವವಿದೆ. ಇದ್ದವರಲ್ಲಿ ಕೊಂಚ ಮತ ಕಡಿಮೆ ಬರಬಹುದಾದ ಸದಸ್ಯರೆಂದರೆ ಕೃಷಿ ತಾಪಂಡ.
ಕೃಷಿ ತಾಪಂಡ ಒಮ್ಮೆ ಮನೆಯಿಂದ ಹೊರ ಹೋಗಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರು. ಮನೆಗೆ ಮರಳಿ ಬಂದ ಮೇಲೆ ಚೆನ್ನಾಗಿಯೇ ಆಡುತ್ತಿದ್ದಾರೆ. ಹಾಗಾಗಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ವೀಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ