Publish Date: Tue, 26 Dec 2017 (09:37 IST)
Updated Date: Tue, 26 Dec 2017 (09:42 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಇಂದು ಚೆನ್ನೈನಲ್ಲಿ ಅಭಿಮಾನಿಗಳ ಜತೆ ಮಹತ್ವದ ಸಭೆ ನಡೆಸಿದ್ದು ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.
ಡಿಸೆಂಬರ್ 31 ರಂದು ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮನ್ನು ಬೆಳೆಸಿದ ನಿರ್ದೇಶಕರಾದ ಕೆ ಬಾಲಚಂದರ್ ಅವರನ್ನು ಸ್ಮರಿಸಿದ್ದಾರೆ.
ತಮಗೆ ರಾಜಕೀಯ ಹೊಸದಲ್ಲ. ರಾಜಕೀಯ ನಾಯಕರೊಂದಿಗೆ ಹಲವು ವರ್ಷಗಳೊಂದಿಗೂ ಒಡನಾಟವಿದೆ. ನನ್ನ ಅಭಿನಯ ಮೆಚ್ಚಿ ಜಯಲಲಿತಾ ಹೂ ಬೊಕೆ ಕಳುಹಿಸಿಕೊಟ್ಟಿದ್ದರು ಎಂದು ರಜನೀಕಾಂತ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ