Select Your Language

Notifications

webdunia
webdunia
webdunia
webdunia

ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಕೇಳಿಬಂತು ಸಾಧು ಕೋಕಿಲಾ, ಮಂಡ್ಯ ರಮೇಶ್ ಹೆಸರು?!

ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಕೇಳಿಬಂತು ಸಾಧು ಕೋಕಿಲಾ, ಮಂಡ್ಯ ರಮೇಶ್ ಹೆಸರು?!
ಬೆಂಗಳೂರು , ಶುಕ್ರವಾರ, 22 ಡಿಸೆಂಬರ್ 2017 (16:23 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟರಾದ ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲಾ ಹೆಸರು ಸೆಕ್ಸ್  ಸ್ಕ್ಯಾಂಡಲ್ ನಲ್ಲಿ ಕೇಳಿಬಂದಿದೆ. ಆದರೆ ಇದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ ಎಂದು ನಟ ಮಂಡ್ಯ ರಮೇಶ್ ಖಾಸಗಿ ವಾಹಿನಿಗೆ ಸ್ಪಷ್ಟಪಡಿಸಿದ್ದಾರೆ.
 

ವೇಶ್ಯಾವಾಟಿಕೆ ಆರೋಪದಲ್ಲಿ ಸಿಕ್ಕಿ ಬಿದ್ದ ಯುವತಿಯೊಬ್ಬಳು ಸ್ಯಾಂಡಲ್ ವುಡ್ ನ ಈ ಇಬ್ಬರು ಸ್ಟಾರ್ ನಟರು ತನ್ನನ್ನು ಬಳಸಿಕೊಂಡರು ಎಂದು ಆರೋಪ ಮಾಡಿದ್ದಾಳೆ. ಅವರು ಹೇಳಿದ ಹಾಗೆ ಕೇಳದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸರ ಎದುರು ಬಾಯ್ಬಿಟ್ಟಿದ್ದಾಳೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಆದರೆ ಈ ಹುಡುಗಿ ಯಾರೆಂದೇ ನಮಗೆ ಗೊತ್ತಿಲ್ಲ. ಆರೋಪ ಮಾಡುತ್ತಿರುವ ಮಹಿಳೆಯ ಪರಿಚಯ ಕೂಡಾ ತಮಗಿಲ್ಲ. ಎಲ್ಲರೊಂದಿಗೆ ಸ್ನೇಹದಿಂದಿರುತ್ತೇವೆ. ಆದರೆ ನಾವು ಗೌರವಯುತವಾಗಿ ಬದುಕುತ್ತಿರುವವರು. ಯಾವುದೋ ಒತ್ತಡದಿಂದ ಈ ಯುವತಿ ಇಂತಹ ಆರೋಪ ಮಾಡಿರಬಹುದು ಎಂದು ಮಂಡ್ಯ ರಮೇಶ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾದ ಸ್ವಚ್ಛ ಗ್ರಾಮ ಇರುವುದು ಭಾರತದಲ್ಲಿಯೇ!