Publish Date: Mon, 04 Dec 2017 (11:02 IST)
Updated Date: Mon, 04 Dec 2017 (11:05 IST)
ಬೆಂಗಳೂರು: ಹುಚ್ಚ ಸಿನಿಮಾದಲ್ಲಿ ಕಿಚ್ಚ ಸುದೀಪ್ ಸಿಗರೇಟು ಸೇದಿದ ಸ್ಟೈಲ್ ನೋಡಿ ಅದೆಷ್ಟು ಜನ ಫಿದಾ ಆಗಿದ್ದರೋ.. ಸುದೀಪ್ ರಷ್ಟು ಸ್ಟೈಲಿಶ್ ಆಗಿ ಸಿಗರೇಟು ಸೇದುವವರು ಇಲ್ಲವೇನೋ ಅನ್ನುವಷ್ಟು ರಿಯಲಿಸ್ಟಿಕ್ ಆಗಿ ಬಂದಿತ್ತು.
ಆದರೆ ಸುದೀಪ್ ಗೆ ಈ ರೀತಿ ಸ್ಮೋಕ್ ಮಾಡಲು ಟ್ರೈನಿಂಗ್ ಕೊಟ್ಟವರು ಯಾರು ಗೊತ್ತಾ? ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಸುದೀಪ್ ಗೆ ಸಿಗರೇಟು ಸೇದಲು ಹೇಳಿಕೊಟ್ಟವರು ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅಂತೆ!
ಹಾಗಂತ ಸ್ವತಃ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋನ ಕಿಚನ್ ಟೈಮ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಈ ವಾರ ಸಾಧು ಕೋಕಿಲಾ ಮತ್ತು ಪುತ್ರ ಸುರಾಗ್ ಅತಿಥಿಯಾಗಿ ಬಂದಿದ್ದರು.
ಈ ವೇಳೆ ಯಾರಿಗೂ ತಿಳಿಯದ ವಿಷಯ ಬಹಿರಂಗಪಡಿಸಿದ ಕಿಚ್ಚ ‘ಹುಚ್ಚ ಸಿನಿಮಾದಲ್ಲಿ ನನ್ನನ್ನು ನೋಡಿದವರು ಯಾರಾದರೂ ನಾನು ಚೈನ್ ಸ್ಮೋಕರ್ ಅಂದುಕೊಳ್ಳುತ್ತಾರೆ. ಆದರೆ ನನಗೆ ಸಿಗರೇಟ್ ಸೇದುವ ಅಭ್ಯಾಸವೇ ಇರಲಿಲ್ಲ. ಆದರೆ ನಿರ್ದೇಶಕ ಓಂ ಪ್ರಕಾಶ್ ರಾವ್ ಕ್ಯಾರೆಕ್ಟರ್ ಗೆ ಸಿಗರೇಟು ಸೇದಲೇ ಬೇಕು ಎಂದರು. ಆಗ ನನಗೆ ಇದೇ ಸಾಧು ಸಿಗರೇಟು ಸೇದಲು ಹೇಳಿಕೊಟ್ಟಿದ್ದು. ಆಗಲೇ ನಾನು ಸಿಗರೇಟು ರೆಗ್ಯುಲರಾಗಿ ಸೇದಲ್ಲ ಅಂತ ಜನರಿಗೆ ಗೊತ್ತಾಗಬಾರದು ಎಂದು ಕೆಲವು ಮ್ಯಾನರಿಸಂ ಅಳವಡಿಸಿಕೊಂಡೆ’ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ