ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಟ್ವಿಟರ್ ಮೂಲಕ ಕನೆಕ್ಟ್ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಕಿಚ್ಚ ಇದರ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಟ್ವಿಟರ್ ನಲ್ಲಿ ಕಿಚ್ಚನ ಫಾಲೋವರ್ ಗಳ ಸಂಖ್ಯೆ ಇದೀಗ 1.41 ಮಿಲಿಯನ್ ದಾಟಿದೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ ಕಿಚ್ಚ ಭಾವುಕರಾಗಿ ಸಂದೇಶ ಬರೆದುಕೊಂಡಿದ್ದಾರೆ.
ನಿಮ್ಮ ದೈನಂದಿನ ಜೀವನದಲ್ಲಿ ನನಗೂ ಒಂದು ಸ್ಥಾನ ಕೊಟ್ಟಿರುವುದಕ್ಕೆ ಧನ್ಯವಾದಗಳು. ಒಂದು ವೇಳೆ ಯಾರಾದರೂ ನನ್ನ ಬಳಿ ಜೀವನದಲ್ಲಿ ಏನು ಗಳಿಸಿದ್ದೀಯಾ ಎಂದರೆ ನಿಮ್ಮಂತಹ ಎಲ್ಲಾ ಸ್ನೇಹಿತರನ್ನು ತೋರಿಸುತ್ತೇನೆ. ತುಂಬಾ ಧನ್ಯವಾದ. ಪ್ರೀತಿಯಿರಲಿ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ