Publish Date: Thu, 30 Nov 2017 (08:56 IST)
Updated Date: Thu, 30 Nov 2017 (08:57 IST)
ಬೆಂಗಳೂರು: ನಿನ್ನೆ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ. ಸಹಜವಾಗಿ ಅವರ ಟ್ವಿಟರ್ ಪೇಜ್ ತುಂಬಾ ಶುಭಾಷಯಗಳ ಸುರಿಮಳೆಯೇ ಹರಿದಿತ್ತು.
ಚಿತ್ರರಂಗ ಬಿಟ್ಟು ರಾಜಕಾರಣದಲ್ಲಿ ಸಕ್ರಿಯರಾಗಿರುವ ರಮ್ಯಾಗೆ ಸಿನಿಮಾ ರಂಗದಿಂದ ವಿಶ್ ಮಾಡಿದವರು ಕಡಿಮೆಯೇ. ನಟ ರಘು ಮುಖರ್ಜಿ, ಸಿಮ್ರಾನ್ ಸೇರಿದಂತೆ ಕೆಲವರು ಮಾತ್ರ ವಿಶ್ ಮಾಡಿದ್ದರು.
ಆದರೆ ರಾಜಕಾರಣಿಗಳ ಪೈಕಿ ಸಿಎಂ ಸಿದ್ದರಾಮಯ್ಯ ರಮ್ಯಾಗೆ ಶುಭ ಕೋರಿದ್ದು ವಿಶೇಷವಾಗಿತ್ತು. ಹ್ಯಾಪಿ ಬರ್ತ್ ಡೇ. ನಿಮಗೆ ದೇವರು ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಅಧ್ಯಕ್ಷರೂ ಆಗಿರುವ ರಮ್ಯಾಗೆ ಸಿಎಂ ಶುಭ ಕೋರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ