Publish Date: Wed, 29 Nov 2017 (10:45 IST)
Updated Date: Wed, 29 Nov 2017 (10:47 IST)
ಬೆಂಗಳೂರು: ಸಿನಿಮಾ ಮುಗಿದ ಮೇಲೆ ನಟಿಯರು ಪ್ರಚಾರಕ್ಕೆ ಬರಲ್ಲ ಎನ್ನುವ ನಿರ್ಮಾಪಕರ ಆರೋಪ ಹೊಸದೇನಲ್ಲ. ಇದೀಗ ಕಾಲೇಜ್ ಕುಮಾರ್ ಚಿತ್ರದ ನಿರ್ಮಾಪಕ ಪದ್ಮನಾಭ್ ಇಂತಹದ್ದೇ ಆರೋಪ ಮಾಡಿದ್ದಾರೆ.
ಎರಡು ವಾರದ ಹಿಂದೆ ಬಿಡುಗಡೆಯಾದ ಕಾಲೇಜ್ ಕುಮಾರ್ ಈಗ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಹಾಗಿದ್ದರೂ ಪದ್ಮನಾಭ್ ಆರೋಪವೇನು?
ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಗೆ ನಟಿ ಸಂಯುಕ್ತಾಗೆ ಹಲವು ಬಾರಿ ಆಹ್ವಾನ ನೀಡಿದರೂ ಬೇರೆ ಕಮಿಟ್ ಮೆಂಟ್ ನೆಪ ಹೇಳಿ ಬರುತ್ತಿಲ್ಲ. ಹಾಗಂತ ಅವರಿಲ್ಲದೇ ಸಿನಿಮಾ ಪ್ರಚಾರವಾಗಲ್ಲ ಎಂದಲ್ಲ. ಆದರೆ ಒಬ್ಬ ನಟಿಯಾಗಿ ಅವರಿಗೆ ಜವಾಬ್ದಾರಿ ಬೇಕು. ಆಕೆಯ ನಡವಳಿಕೆಯಿಂದ ನನಗೆ ಬೇಸರವಾಗಿದೆ. ಈ ಬಗ್ಗೆ ಫಿಲಂ ಚೇಂಬರ್ ಗೆ ದೂರು ನೀಡಿದ್ದೇನೆ ಎಂದು ನಿರ್ಮಾಪಕ ಪದ್ಮನಾಭ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ