Select Your Language

Notifications

webdunia
webdunia
webdunia
webdunia

ತೆಲುಗಿನಲ್ಲೂ `ಕಿರಿಕ್’ ಮಾಡಲಿದ್ದಾಳೆ ಆರ್ಯ..!

ತೆಲುಗಿನಲ್ಲೂ `ಕಿರಿಕ್’ ಮಾಡಲಿದ್ದಾಳೆ ಆರ್ಯ..!
ಬೆಂಗಳೂರು , ಶುಕ್ರವಾರ, 8 ಸೆಪ್ಟಂಬರ್ 2017 (17:16 IST)
ಕಿರಿಕ್ ಪಾರ್ಟಿ ಚಿತ್ರದಲ್ಲಿ ಅತ್ಯುತ್ತಮ ನಟನೆ ಮೂಲಕ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆಗೆ ಮತ್ತೊಮ್ಮೆ ಅದೇ ಮನಮೋಹಕ ನಟನೆಯನ್ನ ಪುನರಾವರ್ತಿಸುವ ಅವಕಾಶ ಸಿಕ್ಕಿದೆ.
 

ಹೌದು, ಕನ್ನಡದ ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟ್ ತೆಲುಗಿನಲ್ಲಿ ರೀಮೇಕ್ ಆಗುತ್ತಿದ್ದು, ರಕ್ಷಿತ್ ಶೆಟ್ಟಿ ನಿರ್ವಹಿಸಿದ್ದ ಪಾತ್ರವನ್ನ ಹ್ಯಾಪಿ ಡೇಸ್ ಖ್ಯಾತಿಯ ನಿಕಿಲ್ ನಿರ್ವಹಿಸುತ್ತಿದ್ದಾರೆ. ಕಿರಿಕ್ ಪಾರ್ಟಿಯಲ್ಲಿ ಆರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಹೆಗ್ಡೆ ಇಲ್ಲೂ ಸಹ ಅದೇ ಪಾತ್ರ ನಿರ್ವಹಿಸುತ್ತಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ಮಾಡಿದ ಪಾತ್ರವೇ ನನಗೆ ಮತ್ತೆ ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ಆರ್ಯ ಪಾತ್ರವನ್ನ ಮಾಡುವುದಕ್ಕೆ ನನಗೆ ತುಂಬಾ ಇಷ್ಟ. ಇದು ನನ್ನ ಜೀವನದ ಅತ್ಯಂತ ಸುಸದಂರ್ಭ ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ನಟಿ ಸಂಯುಕ್ತಾ ಹೆಗ್ಡೆ ಹೇಳಿಕೊಂಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಆರ್.ಎನ್. ಸುದರ್ಶನ್ ವಿಧಿವಶ