Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಮದುವೆ ಫಿಕ್ಸ್? ಹುಡುಗಿ ಯಾರು ಗೊತ್ತಾ?

ರಕ್ಷಿತ್ ಶೆಟ್ಟಿ ಮದುವೆ ಫಿಕ್ಸ್? ಹುಡುಗಿ ಯಾರು ಗೊತ್ತಾ?
Bangalore , ಭಾನುವಾರ, 7 ಮೇ 2017 (10:36 IST)
ಬೆಂಗಳೂರು: ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಜೀವದಲ್ಲಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಆರಂಭವಾಗಿದೆಯಂತೆ. ಸದ್ಯದಲ್ಲೇ ಉಳಿದವರಿಗೂ ಅದು ಕಾಣುತ್ತದಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

 
ರಕ್ಷಿತ್ ತಮ್ಮ ಕಿರಿಕ್ ಪಾರ್ಟಿ ಹೀರೋಯಿನ್ ರಶ್ಮಿಕಾ ಮಂದಣ್ಣ ಜತೆ ಲವ್ ಲೈಫ್ ಸ್ಟಾರ್ಟ್ ಮಾಡಿದ್ದಾರೆಂದು ಗಾಸಿಪ್ ಹಬ್ಬಿತ್ತು. ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು, ರಶ್ಮಿಕಾ ಒಳ್ಳೆ ಹುಡುಗಿ. ಅವಳೇ ನಮ್ಮ ಸೊಸೆಯಾಗಬಾರದೇಕೆ ಎಂದು ಒಮ್ಮೆ ರಕ್ಷಿತ್ ತಾಯಿ ಹೇಳಿದ್ದರೆಂದು ವರದಿಯಾಗಿದೆ.

ಆದರೆ ಈ ಬಗ್ಗೆ ರಕ್ಷಿತ್ ಆಗಲೀ, ಅವರ ಕುಟುಂಬದವರಾಗಲೀ ಅಧಿಕೃತ ಹೇಳಿಕೆ ನೀಡಿಲ್ಲ. ನಿನ್ನೆ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಕ್ಷಿತ್ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗಲೂ ಅವರು ಸುಮ್ಮನೇ ನಕ್ಕರು.

ಅಲ್ಲದೆ, ಎರಡು ತಿಂಗಳ ನಂತರ ಇದಕ್ಕೆ ಉತ್ತರಿಸುವುದಾಗಿ ಹೇಳಿಕೊಂಡರು. ಅಂದರೆ ಲವ್ ಲೈಫ್ ಸ್ಟಾರ್ಟ್ ಆಗಿರುವುದಂತೂ ನಿಜ ಎಂದಾಯ್ತು. ಆದರೆ ಅದು ರಕ್ಷಿತ್ ಬಾಯಿಯಿಂದಲೇ ಬರುವುದನ್ನು ಗಾಂಧಿನಗರ ಎದುರು ನೋಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಕಿರಿಕ್ ಗಳ ಬಗ್ಗೆ ತಿಳಿದುಕೊಳ್ಳಬೇಕೇ?