Publish Date: Sat, 03 Jun 2017 (08:09 IST)
Updated Date: Sat, 03 Jun 2017 (09:03 IST)
ಬೆಂಗಳೂರು: ಕಿರಕ್ ಪಾರ್ಟಿ ಚಿತ್ರದ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಅಫೇರ್ ಇದೆ ಎಂದು ಹಲವಾರು ದಿನಗಳಿಂದ ಸುದ್ದಿ ಹಬ್ಬಿತ್ತು. ಅದನ್ನೀಗ ಇವರು ನಿಜ ಮಾಡುತ್ತಿದ್ದಾರೆ.
ಹೌದು. ಕಿರಿಕ್ ಪಾರ್ಟಿ ಜೋಡಿ ಮದುವೆಯಾಗುವುದು ಕನ್ ಫರ್ಮ್ ಆಗಿದೆ. ಜುಲೈ 3 ರಂದು ಕುಶಾಲನಗರದಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ ಎಂದು ವರದಿಯಾಗಿದೆ.
ಆದರೆ ಮದುವೆ ಯಾವಾಗ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಅದು ಸದ್ಯಕ್ಕಂತೂ ಇರುವ ಸಾಧ್ಯತೆ ಇಲ್ಲ. ಯಾಕೆಂದರೆ, ಇಬ್ಬರೂ ಸದ್ಯಕ್ಕೆ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಹಾಗಾಗಿ ಮದುವೆ, ಸಂಸಾರದಲ್ಲಿ ಮುಳುಗುವಷ್ಟು ಪುರುಸೊತ್ತಿಲ್ಲ. ಆದರೆ ನಿಶ್ಚಿತಾರ್ಥ ಮಾತ್ರ ಕನ್ ಫರ್ಮ್ ಆಗಿದೆ.
ರಶ್ಮಿಕಾ ಅವರನ್ನು ಸ್ವತಃ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತೆರೆಗೆ ಪರಿಚಿಯಿಸಿದ್ದರು. ಇದೀಗ ಅವರನ್ನೇ ಮದುವೆಯಾಗುವ ಮೂಲಕ ಹಲವು ಹುಡುಗಿಯರಿಗೆ ನಿರಾಸೆ ಮಾಡಿದ್ದಾರೆ ರಕ್ಷಿತ್!