Publish Date: Tue, 28 Nov 2017 (10:56 IST)
Updated Date: Tue, 28 Nov 2017 (10:58 IST)
ಬೆಂಗಳೂರು: ಬಾಲಿವುಡ್ ನಲ್ಲಿ ಸದ್ಯಕ್ಕೆ ವಿವಾದಗಳಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ಪದ್ಮಾವತಿ. ಈ ಸಿನಿಮಾ ಬಗ್ಗೆ ಏನೋ ಹೇಳಲು ಹೋಗಿ ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ರಜಪೂತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪದ್ಮಾವತಿ ಸಿನಿಮಾ ಬಗ್ಗೆ ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಶಿವಣ್ಣ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಉತ್ತಮವಾಗಿ ಅಭಿನಯಿಸಿದ್ದಾರೆ ಎನಿಸುತ್ತದೆ. ಸಂಜಯ್ ಲೀಲಾ ಬನ್ಸಾಲಿ ಒಳ್ಳೆ ಸಿನಿಮಾ ಮಾಡಿರ್ತಾರೆ ಎನ್ನುವ ಭರವಸೆ ಇದೆ. ವಿರೋಧಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಿದಂತಾಗುತ್ತದೆ ಎಂದು ಶಿವರಾಜ್ ಕುಮಾರ್ ಹೇಳಿರುವುದು ಈಗ ವಿವಾದಕ್ಕೊಳಗಾಗಿದೆ.
ಈ ಹೇಳಿಕೆ ವಿರುದ್ಧ ರಜಪೂತರು ಇದೀಗ ಕೆಂಡ ಕಾರಿದ್ದಾರೆ. ಹೀಗಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ಮತ್ತು ರಜಪೂತರ ನಡುವೆ ಚರ್ಚೆಯಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ