Select Your Language

Notifications

webdunia
webdunia
webdunia
webdunia

ಸೆಕ್ಸ್ ಸ್ಕ್ಯಾಂಡಲ್: ಕೇರಳ ಸಾರಿಗೆ ಸಚಿವ ರಾಜೀನಾಮೆ

ಸೆಕ್ಸ್ ಸ್ಕ್ಯಾಂಡಲ್: ಕೇರಳ ಸಾರಿಗೆ ಸಚಿವ ರಾಜೀನಾಮೆ
ತಿರುವನಂತಪುರ , ಭಾನುವಾರ, 26 ಮಾರ್ಚ್ 2017 (19:09 IST)
ಮಹಿಳೆಯೊಬ್ಬರ ಜೊತೆ ಲೈಂಗಿಕಾಸಕ್ತಿಯ ಸಂಭಾಷಣೆ ನಡೆಸಿ ಸಿಕ್ಕಿಬಿದ್ದ ಆರೋಪದಡಿ ಕೇರಳ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್ ರಾಜೀನಾಮೆ ನೀಡಿದ್ದಾರೆ. ಮಹಿಳೆ ಜೊತೆ ಅಸಭ್ಯ ಸಂಭಾಷಣೆಯನ್ನೊಳಗೊಂಡ ಆಡಿಯೋ ಸಿಡಿಯನ್ನ ಮಂಗಳಂ ಸುದ್ದಿವಾಹಿನಿ ಸತತ 3 ಗಂಟೆಗಳ ಕಾಲ ಪ್ರಸಾರ ಮಾಡಿತ್ತು. ಬಳಿಕ, ಸಚಿವ ಶಶೀಂದ್ರನ್ ರಾಜೀನಾಮೆ ನೀಡಿದ್ದಾರೆ.
 

ಸಿಡಿಯಲ್ಲಿರುವ ಧ್ವನಿ ಯಾವ ಮಹಿಳೆಯದ್ದು ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ, ಆಡಿಯೋದಲ್ಲಿ ಅಶ್ಲೀಲ, ಲೈಂಗಿಕಾಸಕ್ತಿಯ ವಿಷಯಗಳು ಬಂದುಹೋಗುತ್ತವೆ. ಸಚಿವರೇ ಎನ್ನಲಾಗುತ್ತಿರುವ ವ್ಯಕ್ತಿ ನಾನು ಗೋವಾಗೆ ಬಂದಿದ್ದೇನೆ ಎಂದು ಮಾತು ಆರಂಭಿಸಿ ಮಹಿಳೆಯನ್ನ ಆಹ್ವಾನಿಸುತ್ತಾನೆ. ಬಳಿಕ ಕೇಳಲಸಾಧ್ಯವಾದ ಪದಗಳು ಬಂದುಹೋಗುತ್ತವೆ.

ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಶಶೀಂದ್ರನ್,ರಾಜಕೀಯ ನೈತಿಕತೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಇದರಲ್ಲಿ ನನ್ನ ತಪ್ಪಿಲ್ಲ, ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ. ಈ ಕುರಿತು, ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್, ಸರ್ಕಾರ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಆಯ್ತು ಕೂಲ್ ಸಿಟಿ ಬೆಂಗಳೂರು... ದಾಖಲೆಯ ಉಷ್ಣಾಂಶ ದಾಖಲು