Select Your Language

Notifications

webdunia
webdunia
webdunia
webdunia

ಹಾಟ್ ಆಯ್ತು ಕೂಲ್ ಸಿಟಿ ಬೆಂಗಳೂರು... ದಾಖಲೆಯ ಉಷ್ಣಾಂಶ ದಾಖಲು

ಹಾಟ್ ಆಯ್ತು ಕೂಲ್ ಸಿಟಿ ಬೆಂಗಳೂರು... ದಾಖಲೆಯ ಉಷ್ಣಾಂಶ ದಾಖಲು
ಬೆಂಗಳೂರು , ಭಾನುವಾರ, 26 ಮಾರ್ಚ್ 2017 (18:17 IST)
ತಂಪು ತಂಪಾದ ಬೆಂಗಳೂರು ಸಿಟಿ ಈಗ ಸಿಕ್ಕಾಪಟ್ಟೆ ಹಾಟ್ ಆಗಿದೆ. ಮಾರ್ಚ್ 25ರಂದು ಬೆಂಗಳೂರಲ್ಲಿ ದಾಖಲೆಯ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಕಳೆದ ಕಳೆದ 21 ವರ್ಷಗಳಲ್ಲೇ ಅಧಿಕ ಎನ್ನಲಾಗಿದೆ.

1996ರ ಮಾರ್ಚ್ 29ರಂದು ಬೆಂಗಳೂರಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಹೀಗಾಗಿ, ಮಧ್ಯಾಹ್ನವಾದರೆ ಬೆಂಗಳೂರಲ್ಲಿ ಹೊರಗೆ ಬರುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿದೆ. ಏಪ್ರಿಲ್ ಹೊತ್ತಿಗೆ ಉಷ್ಣಾಂಶ ಮತ್ತಷ್ಟು ಏರಿಕೆಯಾದರೂ ಅಚ್ಚರಿ ಇಲ್ಲ.

ಗಾರ್ಡನ್ ಸಿಟಿ ಬೆಂಗಳೂರಲ್ಲಿ ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ಮರಗಳು ಧರೆಗುರುಳಿದ್ದು, ಮೊದಲಿದ್ದಂತಹ ತಂಪಾದ ಹವಾಗುಣದ ಸೃಷ್ಠಿ ಸಾಧ್ಯವಾಗುತ್ತಿಲ್ಲ. ನಗರದ ಹೊರವಲಯವೂ ಸಹ ಕಾಂಕ್ರೀಟ್ ಕಾಡಾಗಿರುವುದು, ಉಷ್ಣಾಂಶ ಹೆಚ್ಚಾಗಲು ಕಾರಣ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದಲ್ಲಿ ಮತ್ತೊಂದು ಶೂಟೌಟ್: ಮದಿರೆ ಮತ್ತಿನಲ್ಲಿದ್ದವರ ಎದೆಗೆ ಗುಂಡು