Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಮತ್ತೊಂದು ಶೂಟೌಟ್: ಮದಿರೆ ಮತ್ತಿನಲ್ಲಿದ್ದವರ ಎದೆಗೆ ಗುಂಡು

ಅಮೆರಿಕದಲ್ಲಿ ಮತ್ತೊಂದು ಶೂಟೌಟ್: ಮದಿರೆ ಮತ್ತಿನಲ್ಲಿದ್ದವರ ಎದೆಗೆ ಗುಂಡು
ಸಿನ್ಸಿನಾಟಿ , ಭಾನುವಾರ, 26 ಮಾರ್ಚ್ 2017 (17:31 IST)
ಅಮೆರಿಕದಲ್ಲಿ ಮತ್ತೊಂದು ನೈಟ್ ಕ್ಲಬ್`ನಲ್ಲಿ ಶೂಟೌಟ್ ನಡೆದಿದ್ದು, ಒಬ್ಬ ಮೃತಪಟ್ಟು, 15ಕ್ಕೂ ಅಧಿಕ ಮಂದಿ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ.

ಭಾನುವಾರ ಬೆಳಗಿನ ಜಾವ ಸಿನ್ಸಿನಾಟಿಯ ಒಹಿಯೋದ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿದ ಇಬ್ಬರು ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

ಗುಂಡಿನ ದಾಳಿಗೆ ಕಾರಣವೇನು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನರಮೇಧ ನಡೆಸಿದ ಬಂದೂಕುಧಾರಿಗಳು ತಪ್ಪಿಸಿಕೊಂಡಿದ್ದು, ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ನೈಟ್ ಕ್ಲಬ್`ನಲ್ಲಿದ್ದ ನೂರಾರು ಮಂದಿ ಗುಂಡಿನ ಶಬ್ಧ ಕೇಳುತ್ತಲೇ ದಿಕ್ಕಾಪಾಲಾಗಿ ಓಡಿದ್ದಾರೆ. ಪ್ರತ್ಯಕ್ಷದರ್ಶಿಗಳಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಗೆ ಪೋರ್ನ್ ವಿಡಿಯೋ ತೋರಿಸಿ, ಅರೆಬೆತ್ತಲೆ ಡ್ಯಾನ್ಸ್ ಮಾಡುತ್ತಿದ್ದ ಶಿಕ್ಷಕಿ ಅರೆಸ್ಟ್