Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳಿಗೆ ಪೋರ್ನ್ ವಿಡಿಯೋ ತೋರಿಸಿ, ಅರೆಬೆತ್ತಲೆ ಡ್ಯಾನ್ಸ್ ಮಾಡುತ್ತಿದ್ದ ಶಿಕ್ಷಕಿ ಅರೆಸ್ಟ್

ವಿದ್ಯಾರ್ಥಿಗಳಿಗೆ ಪೋರ್ನ್ ವಿಡಿಯೋ ತೋರಿಸಿ, ಅರೆಬೆತ್ತಲೆ ಡ್ಯಾನ್ಸ್ ಮಾಡುತ್ತಿದ್ದ ಶಿಕ್ಷಕಿ ಅರೆಸ್ಟ್
ಪೋರಬಂದರ್ , ಭಾನುವಾರ, 26 ಮಾರ್ಚ್ 2017 (16:59 IST)
ಶಿಕ್ಷಕರೆಂದರೆ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್. ಗುರು ಎಂದರೆ ದೈವ ಎಂಬ ಮಾತಿದೆ. ಆದರೆ, ಈ ಶಿಕ್ಷಕಿಯನ್ನ ಅದೇನನ್ನಬೇಕೋ ಗೊತ್ತಾಗುತ್ತಿಲ್ಲ. ಶಿಕ್ಷಕಿಯೊಬ್ಬಳು ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ, ತೋರಿಸಿ, ಅಶ್ಲೀಲ ಮಾತುಗಳನ್ನಾಡಿದ್ದಲ್ಲದೆ ತನ್ನ ಕೊಠಡಿಗೆ ಕರೆದೊಯ್ದು ವಿದ್ಯಾರ್ಥಿಗಳ ಮುಂದೆ ಅಶ್ಲೀಲ ನೃತ್ಯ ಮಾಡುತ್ತಿದ್ದ ಶಾಕಿಮಗ್ ನ್ಯೂಸ್ ಗುಜರಾತ್`ನಿಂದ ವರದಿಯಾಗಿದೆ..
 

ಪೋರಬಂದರ್`ನ ವಿದ್ಯಾ ಮಂದಿರ್ ಶಾಲೆಯ ಶಿಕ್ಷಕಿ ಇಂಥದ್ದೊಂದು ಗಂಭೀರ ಆರೋಪ ಎದುರಿಸುತ್ತಿದ್ದಾಳೆ. ಹಲವು ದಿನಗಳಿಂದ ವಿದ್ಯಾರ್ಥಿಗಲ ಜೊತೆ ಅಸಭ್ಯವಾಗಿ ವರ್ತಿಸಿರುವ ಶಿಕ್ಷಕಿ ಈ ವಿಷಯವನ್ನ ಎಲ್ಲಿಯಾದರೂ ಬಾಯ್ಬಿಟ್ಟರೆ ಶಾಲೆಯಿಂದ ಡಿಬಾರ್ ಮಾಡುವುದಾಗಿ ಬೆದರಿಸಿದ್ದಳಂತೆ. ವಿದ್ಯಾರ್ಥಿಯೊಬ್ಬ ಪೋಷಕರ ಈ ಈ ಹೀನ ಕೃತ್ಯದ ಬಗ್ಗೆ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಶಿಕ್ಷಕಿ, ನಮ್ಮನ್ನ ಕೊಠಡಿಗೆ ಕರೆದೊಯ್ದು ಅರೆನಗ್ನ ನೃತ್ಯ ಮಾಡುತ್ತಿದ್ದಳು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಶಿಕ್ಷಕಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲಮನ್ನಾಗೆ ಒತ್ತಾಯಿಸಿ ಆದಿತ್ಯನಾಥ್ ತವರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ