Select Your Language

Notifications

webdunia
webdunia
webdunia
webdunia

ಸಾಲಮನ್ನಾಗೆ ಒತ್ತಾಯಿಸಿ ಆದಿತ್ಯನಾಥ್ ತವರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಸಾಲಮನ್ನಾಗೆ ಒತ್ತಾಯಿಸಿ ಆದಿತ್ಯನಾಥ್ ತವರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಲಖನೌ , ಭಾನುವಾರ, 26 ಮಾರ್ಚ್ 2017 (15:25 IST)
ಸಾಲಮನ್ನಾಗೆ ಒತ್ತಾಯಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋರಖ್ ಪುರದ ಗೋರಖ್ ನಾಥ್ ದೇಗುಲದ ಸಮೀಪ ನಡೆದಿದೆ. ಸದ್ಯ, ಸಿಎಂ ಯೋಗಿ ಆದಿತ್ಯನಾಥ್ 2 ದಿನಗಳ ಗೋರಖ್ ಪುರದ ಪ್ರವಾಸದಲ್ಲಿದ್ದು, ಸಿಎಂ ವಾಸ್ತವ್ಯ ಹೂಡುವ ದೇಗುಲದ ಬಳಿಯೇ ಆತ್ಮಹತ್ಯೆಗೆ ಯತ್ನಿದ್ದಾನೆ.

ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ಸ್ಥಳೀಯರು ಪಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ವ್ಯಕ್ತಿಯನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ತನ್ನ ವೈದ್ಯಕೀಯ ಚಿಕಿತ್ಸೆಗೆ ಈ ವ್ಯಕ್ತಿ ಬಹಳಷ್ಟು ಸಾಲ ಮಾಡಿಕೊಂಡಿದ್ದ ಬಿಜೆಪಿ ಸರ್ಕಾರದಲ್ಲಿ ತನ್ನ ಸಾಲಮನ್ನಾದ ಘೋಷಣೆ ಹೊರಬೀಳುವ ವಿಶ್ವಾಸದಲ್ಲಿದ್ದ ಎನ್ನಲಾಗಿದೆ.

ಸದ್ಯ, ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬಂದರೆ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಸಾಲಮನ್ನಾ ಮಾಡುವ ಭರವಸೆಯನ್ನ ಪ್ರಧಾನಿ ಮೋದಿ ನೀಡಿದ್ದರು. ಆದರೆ, ಈ ನಿರ್ಧಾರ ಕೈಗೊಳ್ಳುವಲ್ಲಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದ್ದು, ಜನರಿಂದ ಟೀಕೆಗಳು ಕೇಳಿಬರುತ್ತಿವೆ ಎನ್ನಲಾಗಿದೆ.





Share this Story:

Follow Webdunia kannada

ಮುಂದಿನ ಸುದ್ದಿ

250 ಕೋಟಿ ರೂ. ಡೆಪಾಸಿಟ್ ಮಾಡಿದವನಿಗೆ ಬಿತ್ತು ಶೇ.45ರಷ್ಟು ಟ್ಯಾಕ್ಸ್