Select Your Language

Notifications

webdunia
webdunia
webdunia
webdunia

ನಟ ಸಾಧು ಕೋಕಿಲಾ ಕಾರು ಚಾಲಕನ ಬಂಧನ

ನಟ ಸಾಧು ಕೋಕಿಲಾ ಕಾರು ಚಾಲಕನ ಬಂಧನ
Bangalore , ಭಾನುವಾರ, 14 ಮೇ 2017 (13:32 IST)
ಬೆಂಗಳೂರು: ನಟ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಅವರ ಕಾರು ಚಾಲಕ ವಿಜಯ್ ಕುಮಾರ್ ನನ್ನು ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿದೆ.

 
ಸಾಧು ಕಾರಿನಲ್ಲೇ ಕಳ್ಳತನ ಮಾಡಿ ಈತ ಸಿಕ್ಕಿ ಬಿದ್ದಿದ್ದಾನೆ. ಕಾರಿನಲ್ಲಿಟ್ಟಿದ್ದ 1.5 ಲಕ್ಷ ರೂ. 300 ಅಮೆರಿಕನ್ ಡಾಲರ್ ಹಣ ಮತ್ತು ಲ್ಯಾಪ್ ಟಾಪ್ ಒಂದನ್ನು ಈತ ಕಳ್ಳತನ ಮಾಡಿದ್ದ.

ತಮ್ಮ ಸಹೋದರಿ ಮನೆಗೆ ಹೋಗಿದ್ದಾಗ ವಿಜಯ್ ಕುಮಾರ್ ಗೆ ಕಾರು ಹೊರಗಡೆ ನಿಲ್ಲಿಸಲು ಹೇಳಿ ಸಾಧು ಮನೆಯೊಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಚಾಲಕ ಕಾರಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮತ್ತು ಹಣವನ್ನು ತನ್ನ ಮನೆಗೆ ಸಾಗಿಸಿದ್ದ.

ಈ ಬಗ್ಗೆ ಸಾಧು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನಂತರ ಚಾಲಕನೇ ಕೃತ್ಯವೆಸಗಿದ್ದು ಬೆಳಕಿಗೆ ಬಂದಿದೆ. ಈ ಹಿಂದೆಯೂ ಸಾಧು ಕಾರಿನಿಂದ ಸಣ್ಣ ಪುಟ್ಟ ವಸ್ತುಗಳು ನಾಪತ್ತೆಯಾಗಿತ್ತು. ಆದರೆ ಆಗ ಸಾಧು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಫೋಟೋಶೂಟ್`ನಲ್ಲಿ ಮತ್ತಷ್ಟು ಬಿಸಿ ಏರಿಸಿದ ಪ್ರಿಯಾಂಕಾ ಚೋಪ್ರಾ